ಗುದ್ದಲಿ ಪೂಜೆ
ತಿಪಟೂರು: ತಾಲೂಕಿನ ಗೌಡನಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆರ್ಎಂಎಸ್ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ವತಿಯಿಂದ ಮಂಜೂರಾದ ತರಗತಿ ಕೊಠಡಿಗಳ ಗುದ್ದಲಿ ಪೂಜೆಯನ್ನು ಶಾಸಕರಾದ ಕೆ.ಷಡಾಕ್ಷರಿ ನೆರವೇರಿಸಿದರು. ಸಂದರ್ಭದಲ್ಲಿ ಗುರುಗದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಸದಸ್ಯೆ ಕಮಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಮುಖ್ಯ ಶಿಕ್ಷಕರಾದ ಕೆ.ಎಸ್.ವನಜಾಕ್ಷಿ, ಶಾಲಾ ಎಸ್ಡಿಎಂಸಿ ಙಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.