ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ

Rashmi Kasaragodu
Updated On : 30 Nov 2013, 12:22 pm

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘದ ವತಿಯಿಂದ ತೆಂಗಿನಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಮರ ಹತ್ತುವ ಸಾಧನ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೈತರಿಗೆ ತೆಂಗಿನಲ್ಲಿ ಉತ್ಪಾದನಾ ತಾಂತ್ರಿಕತೆಗಳು, ಮಣ್ಣು, ನೀರು ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ವಿವಿಧ ವಿಷಯಗಳನ್ನು ತಿಳಿಸಲಾಯಿತು. ಹಾಗೂ ಮರ ಹತ್ತುವ ಸಾಧನ ಉಪಯೋಗಿಸಿ ತೆಂಗಿನ ಮರ ಹತ್ತುವ ಕೌಶಲ್ಯವನ್ನು ಸಹ ತಿಳಿಸಿಕೊಡಲಾಯಿತು. ಕೇಂದ್ರದ ಮುಖ್ಯಸ್ಥರಾದ ಡಾ.ಜಿ.ಎಂ.ಸುಜಿತ್, ವಿಜ್ಞಾನಿಗಳಾದ ಡಾ.ನಾಗಪ್ಪದೇಸಾಯಿ, ಡಾ.ಶ್ರೀನಿವಾಸ್, ಡಾ.ಶಂಕರ್, ಡಾ.ಮಮತಾ.ಡಾ.ರೂಪಾ ಬಿ ಪಾಟೀಲ್, ಡಾ. ಶಿವಪ್ಪ ನಾಯಕ ಹಾಗೂ ಕೃಷಿ ತಜ್ಞ ಹೇಮಂತ್ ಮತ್ತು 20 ಜನ ರೈತರು ಭಾಗವಹಿಸಿದ್ದರು. ಹಾಗೂ ತರಬೇತಿ ಪಡೆದ ರೈತರಿಗೆ ಮರ ಹತ್ತುವ ಸಾಧನ ವಿತರಿಸಲಾಯಿತು.

ಅರ್ಜಿ ಆಹ್ವಾನ
ತುಮಕೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ 2012-13ನೇ ಸಾಲಿಗೆ ನೀಡುವ ಕಿತ್ತೂರು  ರಾಣಿಚೆನ್ನಮ್ಮ  ಪ್ರಶಸ್ತಿ ಸಲುವಾಗಿ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ  ಮತ್ತು ಕ್ರೀಡೆ, ಕಲೆ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement