ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಪತ್ರಕರ್ತರನ್ನು ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣ'

Rashmi Kasaragodu
Updated On : 1 Dec 2013, 1:21 am

ಚಿಕ್ಕನಾಯಕನಹಳಿ: ಕೆಲವೇ ಜನರ ಭಯೋತ್ಪಾದಕ ಕೃತ್ಯದಿಂದ ಇಡೀ ಒಂದು ಜನಾಂಗವನ್ನೇ  ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯಾರೋ ಒಬ್ಬ ಪತ್ರಕರ್ತ ಮಾಡುವ ತಪ್ಪಿನಿಂದ ಇಡೀ ಪತ್ರಿಕರ್ತರ ಸಮೂಹವನ್ನೇ ಸಮಾಜ ಸಂಶಯದಿಂದ ನೋಡುವ ಸ್ಥಿತಿ ನಿರ್ಮಾಣವಾಗದ ಹಾಗೆ ಪತ್ರಕರ್ತರು ಎಚ್ಚರವಹಿಸಬೇಕು ಎಂದು ಅಖಿಲ ಭಾರತ ಪತ್ರಕರ್ತ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ನುಡಿದರು.
ಅವರಿಂದು ಚಿ.ನಾ.ಹಳ್ಳಿಯಲ್ಲಿ ತಾಲೂಕು ಪತ್ರಕರ್ತರ ಸಂಘ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಕನ್ನಡದ ಇಂಪು - ನಿತ್ಯನೂತನವೀ ಕಂಪು ಎಂಬ ಕಾರ್ಯಕ್ರಮದ  ಸಮಾರೋಪ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಪತ್ರಿಕಾವೃತ್ತಿಗೆ ತನ್ನದೇ ಆದ ನಿಯಮಗಳಿವೆ.ಇದು ಯೋಗ್ಯವೃತ್ತಿ ಎಂದು ಬಂದ ಎಷ್ಟೋ ಜನಸಭ್ಯರು ಕೆಲಮೊಮ್ಮೆ ಭ್ರಮನಿರಸನವಾಗಿ ಹಿಂತಿರುಗಿ ಹೋಗಿರುವ ನಿದರ್ಶನಗಳಿವೆ.ಪತ್ರಿಕೆ ಸಾರ್ವಜನಿಕರ ನಂಬಿಕೆಗೆ ಮುಖವಾಣಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ೆ ನಾವು ಭಾಷಾ ಶೂನ್ಯರಾಗಬಾರದು, ನಮ್ಮತನವನ್ನು ಉಳಿಸಿಕೊಂಡು ಅನ್ಯಭಾಷೆ ಕಲಿಯಬೇಕು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement