ಕಡೆ ಶ್ರಾವಣ ಸೋಮವಾರದ ಅಂಗವಾಗಿ ವಿಶೇಷ ಪೂಜೆ
ಹುಳಿಯಾರು: ಹೋಬಳಿಯ ನಾನಾ ದೇವಾಲಯಗಳಲ್ಲಿ ಶ್ರಾವಣ ಮಾಸದ ಕಡೆ ಸೋಮವಾರದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾಕಾರ್ಯಕ್ರಮಗಳು ಸೇರಿದಂತೆ ಅನ್ನ ಸಂತರ್ಪಣೆ ಜರುಗಿದವು. ಪಟ್ಟಣದ ಮಲ್ಲೇಶ್ವರಸ್ವಾಮಿ ಸೇವಾಟ್ರಸ್ಟ್ ವತಿಯಿಂದ ಶ್ರೀಮಲ್ಲೇಶ್ವರ ಸ್ವಾಮಿ ಸನ್ನಿಧಿ ಹಾಗೂ ಉಣ್ಣೇಬಸವೇಶ್ವರ ದೇವಾಲಯದಲ್ಲಿ ಗ್ರಾಮದೇವತೆ ಕೆಂಚಮ್ಮದೇವಿ ಸಮ್ಮುಖದಲ್ಲಿ ಬೆಳಗಿನಜಾವ ಮಲ್ಲಿಕಾರ್ಜುನಯ್ಯ ಮತ್ತು ವೀರೇಶ್ ಅವರ ಪೌರೋಹಿತ್ಯದಲ್ಲಿ ರುದ್ರಾಭಿಷೇಕ, ಗಂಗಾಪೂಜೆ ಮಹಾಮಂಗಳಾರತಿ ನಡೆಸಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಕೆಂಕೆರೆಯ ಶ್ರೀಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಗ್ರಾಮದೇವತೆ ಕಾಳಿಕಾಂಬದೇವಿ ಸಮ್ಮುಖದಲ್ಲಿ ರುದ್ರಾಭಿಷೇಕ, ಪ್ರಸಾದವಿನಿಯೋಗ ಕಾರ್ಯಕ್ರಮ ನಡೆದವು. ಜೋಡಿ ತಿರುಮಲಾಪುರದ ಶ್ರೀಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ ಕೃಷ್ಣಪ್ಪ, ನಂಜುಂಡಚಾರ್ ಅವರ ಪೌರೋಹಿತ್ಯ ಸ್ವಾಮಿಗೆ ರುದ್ರಾಭಿಷೇಕ, ಮಹಾನ್ಯಾಸಪೂರಕ ಪೂಜೆ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಗಳು ನಡೆದು ನಂತರ ಮಹಾಮಂಗಳಾರತಿಯೊಂದಿಗೆ ದಾಸೋಹ ಕಾರ್ಯಕ್ರಮ ನಡೆದವು.