ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಡಿವ ನೀರಿನ ಘಟಕಗಳ ವಿರುದ್ಧ ಕಾರ್ಯಾಚರಣೆ

Rashmi Kasaragodu
Updated On : 3 Sept 2013, 12:42 pm

ತುಮಕೂರು: ಕರ್ನಾಟಕ ಉಚ್ಚನ್ಯಾಯಾಲಯದ  ಆದೇಶದನ್ವಯ ಐ.ಎಸ್.ಐ. ಪರವಾನಗಿ ಹೊಂದಿಲ್ಲದ  ಪ್ಯಾಕೇಜ್ ಕುಡಿಯುವ ನೀರಿನ ಉತ್ಪಾದನಾ ಘಟಕಗಳ ವಿರುದ್ಧದ ಕಾರ್ಯಾಚರಣೆ ತುಮಕೂರು ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಅಧಿಕೃತ ಮಾನ್ಯತೆ ಹೊಂದಿದ ಘಟಕಗಳ ವಿವರ ಈ ಕೆಳಕಂಡಂತಿದೆ. ಸಹರಾ ಇಂಡಸ್ಟ್ರೀಸ್, ಹುಳಿಯಾರ್, ಕಿಂಗ್ಸ್ ಡೇಸ್, ಮತ್ತಿಘಟ್ಟ, ಗುಬ್ಬಿ ತಾಲೂಕು, ಶ್ರೀ ಇಂಡಸ್ಟ್ರೀಸ್ ನಡೆಮಾವಿನಪುರ, ಕುಣಿಗಲ್ ತಾಲ್ಲೂಕು, ಸಿದ್ದಲಿಂಗೇಶ್ವರ ಪುಡ್ ಮತ್ತು ಬಿವರೇಜಸ್, ಅಂತರಸನಹಳ್ಳಿ, ತುಮಕೂರು, ಲಕ್ಷ್ಮೀ ಮಿನರಲ್ಸ್, ಹನುಮಂತಪುರ, ತುಮಕೂರು ತುಳಸಿ ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ತುಮಕೂರು  ಸುರಭಿ ಅಕ್ವಾ ಇಂಟರ್ ನ್ಯಾಷನಲ್, ತುಮಕೂರು  ಕೋರಲ್ ಅಕ್ವಾ ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ತುಮಕೂರು, ಹನಿ ಪ್ಯಾಕೇಜ್  ಡ್ರಿಂಕಿಂಗ್ ವಾಟರ್ ಶಶಿ ಅಕ್ವಾಟೆಕ್, ತುಮಕೂರು. ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ವಹಿವಾಟಿನಲ್ಲಿ ತೊಡಗಿದ್ದ 78 ಘಟಕಗಳನ್ನು  ಗುರುತಿಸಲಾಗಿದ್ದು, ಅವುಗಳ ಪೈಕಿ 30 ಘಟಕಗಳಿಗೆ ಬೀಗಮುದ್ರೆ ಹಾಕಲಾಗಿದೆ.  ಬೀಗಮುದ್ರೆ ಹಾಕಲಾದ ಘಟಕಗಳ ಪೈಕಿ 7 ಘಟಕಗಳ ಮಾಲೀಕರು ಅಧೀಕೃತ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಬಿ.ಐ.ಎಸ್. ಸಂಸ್ಥೆಯಲ್ಲಿ ಪರಿಶೀಲನಾ ಹಂತದಲ್ಲಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಿಲ್ಲಾ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ. 35 ಮಂದಿ ತಮ್ಮ ಘಟಕಗಳನ್ನು  ಸ್ವಯಂ ತೆರವುಗೊಳಿಸಿ ಮುಚ್ಚಳಿಕೆ ಬರೆದುಕೊಟ್ಟಿದ್ದು,  ಶುದ್ಧೀಕರಣ ಪ್ರಕ್ರಿಯೆ ಇಲ್ಲದೆ ನೀರನ್ನು  ಸರಬರಾಜು ಮಾಡುತ್ತಿದ್ದ 3 ಘಟಕಗಳ ಮಾಲೀಕರಿಗೆ  ಎಚ್ಚರಿಕೆ ನೀಡಿ ತಕ್ಷಣದಿಂದಲೇ ಸರಬರಾಜು  ಕಾರ್ಯ  ಸ್ಥಗಿತಗೊಳಿಸಲು ಆದೇಶಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ನೀರು ಸರಬರಾಜು ಮಾಡುವ ಘಟಕಗಳ ಮಾಲೀಕರುಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್.ಎಸ್.ಎಸ್.ಐ.) ಇವರ ಅಧಿಕೃತ ಪರವಾನಗಿ ಹಾಗೂ ಬಿ.ಐ.ಎಸ್. ಸಂಸ್ಥೆಯ ಪ್ರಮಾಣ ಪತ್ರ ಪಡೆಯುವ ತನಕ ಯಾವುದೇ ರೀತಿಯ ವಹಿವಾಟು ನಡೆಸಬಾರದೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಅನಧೀಕೃತ ನೀರನ್ನು ಸರಬರಾಜು ಮಾಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ರಿತ್ಯಾ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement