ಗಣೇಶ ಉತ್ಸವ: ಸೂಕ್ತ ಮುನ್ನೆಚ್ಚರಿಕೆಗೆ ಸೂಚನೆ
ತುಮಕೂರು: ವಿನಾಯಕ ವೃತ ಹಬ್ಬದ ಪ್ರಯುಕ್ತ ಗಣೇಶ ಉತ್ಸವ ಏರ್ಪಾಟು ಮಾಡುವ ಗಣೇಶ ಮಂಟಪದ ವ್ಯವಸ್ಥಾಪಕರು ಕಡ್ಡಾಯವಾಗಿ ಬೆಂಗಳೂರು ವಿದ್ಯುತ್ ಕಂಪನಿಯಿಂದ ಅಗತ್ಯ ಅನುಮೋದನೆಯನ್ನು ಪಡೆಯುವಂತೆ ಬೆಂ.ವಿ.ಕಂ.ನಗರ ಉಪವಿಭಾಗ-1, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ತಿಳಿಸಿದ್ದಾರೆ. 100 ಕ್ಕಿತ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಉಪವಿದ್ಯುತ್ ಪರಿವೀಕ್ಷಕರಿಂದ ಅನುಮೋದನೆಯನ್ನು ಪಡೆಯಬೇಕಾಗಿ ಸೂಚಿಸಲಾಗಿದೆ. ಗಣೇಶ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ಬೆಸ್ಕಾಂ ಮಾರ್ಗಗಳ ಕೆಳಗೆ ಸಂಚರಿಸುವಾಗ ಬೆಸ್ಕಾಂ ಮಾರ್ಗಗಳಿಗೆ ಸೂಕ್ತ ಅಂತರವನ್ನು ಕಾಯ್ದುಕೊಂಡು ಮೆರವಣಿಗೆ ಮಾಡಬೇಕಾಗಿ ಅವರು ತಿಳಿಸಿದ್ದಾರೆ.