ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪತ್ನಿಕೊಂದ ಪತಿಗೆ ಶಿಕ್ಷೆ

Rashmi Kasaragodu
Updated On : 3 Sept 2013, 12:42 pm

ತುಮಕೂರು: ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆಪಾದಿತನಿಗೆ ತುಮಕೂರಿನ 1ನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಎಂ.ಖಾಜಿ ಅವರು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ. ಕುಣಿಗಲ್ ಟೌನ್ ಗಾಣಿಗರ  ಬೀದಿಯಲ್ಲಿ ಅಪಾದಿತನಾದ ರವಿಕುಮಾರ್ ಪತ್ನಿ  ಸುಜಾತಳೊಂದಿಗೆ  ವಾಸವಿದ್ದು, ಫೆಬ್ರವರಿ 14, 2012 ರ ರಾತ್ರಿ 11 ಟೆಯ ಸಮಯದಲ್ಲಿ  ಮನೆಯ ರೂಮಿನಲ್ಲಿ ಪತ್ನಿಯ ಕುತ್ತಿಗೆಯನ್ನು ಕೈಗಳಿಂದ ಹಿಸುಕಿ, ಮುಖ, ಮೂಗನ್ನು ಕೈಗಳಿಂದ ಅದುಮಿ, ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮನೆಯಲ್ಲಿದ್ದ ಟಿ.ವಿ. ರಟ್ಟಿನ ಪೆಟ್ಟಿಗೆಯಲ್ಲಿ ಹೆಣವನ್ನು ಮುದುರಿ ಸಾರ್ವೆ  ಹುರಿಯಿಂದ ಕಟ್ಟಿರುತ್ತಾನೆ.  ಆರೋಪಿನ ವಿರುದ್ಧ ತನಿಖೆ ನಡೆಸಿದ ಕುಣಿಗಲ್ ಪಿಎಸ್ಐ ಚನ್ನಯ್ಯ ಹಿರೇಮಠ್ ಹಾಗೂ ಸಿಪಿಐ ಬಿ.ಕೆ. ಶೇಖರ್ ಅವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಭಿಯೋಜನೆ ಸಾಕ್ಷಿದಾರರ ಸಾಕ್ಷ್ಯದಿಂದ ಪತ್ನಿ ಕೊಲೆ ಮಾಡಿರುವ ಪ್ರಕರಣ ರುಜುವಾತಾದ ಕಾರಣ ನ್ಯಾಯಾಧೀಶರು ಆಪಾದಿತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಎಚ್. ಶ್ರೀಮತಿ ವಾದಿಸಿದ್ದರು.

ವಿಪರೀತ ಮದ್ಯಪಾನ: ವ್ಯಕ್ತಿ ಸಾವು
ಕುಣಿಗಲ್: ಅತಿ ಮದ್ಯಪಾನದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇಗೌಡನಪಾಳ್ಯದಲ್ಲಿ ನಡೆದಿದೆ.   ಮೃತನನ್ನು ಕೋಡಿಹೊನ್ನಯ್ಯ ಅ.ಮರಿಯಪ್ಪ (52) ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗೆ ವಿಪರೀತ ಮದ್ಯಪಾನ ಮಾಡುವ ಚಟಕ್ಕೆ ಬಲಿಯಾಗಿದ್ದು, ಎಂದಿನಂತೆ ಸೋಮವಾರವೂ ಸಹ ಮದ್ಯಪಾನ ಮಾಡಿ ಮನೆಯ ಬಳಿ ಬಿದಿದ್ದ. ಈತನ ದೇಹಕ್ಕೆ ಇರುವೆಗಳು ಮುತ್ತಿಕೊಂಡಿದ್ದ ಕಾರಣ ಆತಂಕಗೊಂಡ ಮನೆಯವರು, ಪಟ್ಟಣದ ಆಸ್ಪತ್ರೆಗೆ ಕರೆತಂದು ತೋರಿಸಿದಾಗ ಈತ ಮೃತಪಟ್ಟಿದ್ದ. ಮೃತನ ಪತ್ನಿ ಅನಂತಮ್ಮ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement