ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಗುಣಾತ್ಮಕ, ವೈಜ್ಞಾನಿಕ ಸಂಶೋಧನೆಗಳು ಅತ್ಯಗತ್ಯ'

Rashmi Kasaragodu
Updated On : 4 Sept 2013, 1:15 am

ತುಮಕೂರು: ಪ್ರಸ್ತುತ ಸಮಾಜಕ್ಕೆ ಗುಣಾತ್ಮಕ ಹಾಗೂ ವೈಜ್ಞಾನಿಕ ಸಂಶೋಧನೆಗಳು ಅತ್ಯಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು. ಅವರು ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಶೋಧನಾ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಸಂಶೋಧನಾ ವಿಧಾನಗಳು ಮತ್ತು ತಂತ್ರಗಳು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭೌತ ವಿಜ್ಞಾನ ಕ್ಷೇತ್ರಕ್ಕೆ ಸಿಗುವ ಪ್ರೋತ್ಸಾಹ ಹಾಗೂ ಪ್ರಾಮುಖ್ಯತೆ ಸಾಮಾಜಿಕ ಸಂಶೋಧನೆಗಳಿಗೂ ದಕ್ಕಬೇಕಾಗಿದೆ. ಭೌತ ವಿಜ್ಞಾನಿಗಳ ಸಂಶೋಧನೆಗೆ ನೀಡಿದ ಪ್ರೋತ್ಸಾಹ ಸಮಾಜ ವಿಜ್ಞಾನಿಗಳಿಗೂ ದೊರೆತರೆ ಸುಸ್ಥಿರ, ಆರೋಗ್ಯಕರ ಹಾಗೂ ಪ್ರಗತಿಪರ ಸಮಾಜ ನಿರ್ಮಿಸಲು ಸಹಕಾರಿ ಎಂದರು. ಸಂಶೋಧಕರು ಪ್ರಸ್ತುತ ಸಮಾಜದಲ್ಲಿ ಇರುವ ಪ್ರಚಲಿತ ಸಮಸ್ಯೆಗಳನ್ನು ಅಧ್ಯಯನಕ್ಕೆ ಒಳಪಡಿಸಿ ವೈಜ್ಞಾನಿಕವಾದ ಹಾಗೂ ಕಾನೂನಾತ್ಮಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಯುವ ಸಂಶೋಧಕರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಜಯದೇವಪ್ಪ ಮಾತನಾಡಿ ನಮ್ಮ ಕಾಲೇಜು 2007-08 ರಲ್ಲಿ ಪ್ರಾರಂಭಗೊಂಡಿದ್ದು 4 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಪ್ರಥಮ ಬಾರಿಗೆ ಕಾಲೇಜಿನಲ್ಲಿ ಸಂಶೋಧನಾ ಕೋಶದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಿರುವುದು ತುಂಬಾ ಸಂತೋಷದ ವಿಷಯ ಎಂದರು.
ಪ್ರಗತಿಗೆ ಪೂರಕವಾಗಿರಲಿ: ಸಂಶೋಧನೆಗಳು ಸಮಾಜದ ಪ್ರಗತಿಗೆ ಪೂರಕವಾಗಿರಬೇಕು. ಆದರೆ ಹೆಚ್ಚಿನ ಸಂಶೋಧಾ ಪ್ರೌಢ ಪ್ರಬಂಧಗಳು ಕಾರ್ಯರೂಪಕ್ಕೆ ಬಾರದೆ ಗ್ರಂಥಾಲಯದ ಕಪಾಟುಗಳಲ್ಲಿ ನಿದ್ರೆಗೆ ಜಾರುತ್ತಿವೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement