ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಟ್ಕಳ್ ಬಂಧುಗಳ ಬಂಧನಕ್ಕೆ ಆಗ್ರಹ

Rashmi Kasaragodu
Updated On : 4 Sept 2013, 1:19 am

ಉಗ್ರ ಯಾಸಿನ್ ಭಟ್ಕಳ್ ಬಂಧುಗಳನ್ನು ಬಂಧಿಸುವಂತೆ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದರು. ಮಂಗಳವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಗ್ರ ಯಾಸಿನ್ ಭಟ್ಕಳ್ ತುಮಕೂರಿನಲ್ಲೂ ವಾಸ್ತವ್ಯ ಹೂಡಿದ್ದ ಎನ್ನುವ ಶಂಕೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ತುಮಕೂರಿಗೂ ಆಗಮಿಸಿದ್ದರು. ಯಾಸಿನ್ ಗುಬ್ಬಿ ಗೇಟ್, ಸದಾಶಿವನಗರ, ದಾನ- ಪ್ಯಾಲೇಸ್, ಶೆಟ್ಟಿಹಳ್ಳಿ ಗೇಟ್ ಸೇರಿದಂತೆ ಇತರೆಡೆ ವಾಸ್ತವ್ಯ ಹೂಡಿರುವ ಬಗ್ಗೆ ಶಂಕೆ ಮೂಡಿತ್ತು. ಈಗ ಉಗ್ರ ಯಾಸಿನ್ನನ್ನು ಬಂಧಿಸಿದ್ದು, ಆಥನ ಬಂಧುಗಳು ಹಾಗೂ ಜಿಲ್ಲೆಯ ಹಲವೆಡೆ ಆತ ಉಳಿದುಕೊಂಡಿದ್ದ ಪ್ರದೇಶಗಳ ಬಗ್ಗೆ ತೀವ್ರ ತನಿಖೆ ನಡೆಸಬೇಕು. ಉಗ್ರನೊಂದಿಗೆ ನಂಟಿರುವವರನ್ನು ಶೀಘ್ರವೇ ಬಂಧಿಸಬೇಕೆಂದರು.
ಮಾಹಿತಿ ಇರುತ್ತಲ್ವಾ?: ಬಿಜೆಪಿ ಸರ್ಕಾರ 5 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದೆ. ತಮ್ಮ ಸರ್ಕಾರದ ಅವಧಿಯಲ್ಲೇ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಸಂಭವಿಸಿತ್ತು. ಆದ್ದರಿಂದ ಆತನ ಬಗ್ಗೆ ಸಂಪೂರ್ಣ ಮಾಹಿತಿ ತಮಗೂ ಇರಬೇಕಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಸಂಶಯವಿತ್ತು. ಈಗ ಅವನೇ ಸಿಕ್ಕಿ ಬಿದ್ದಿದ್ದಾನೆ. ತುಮಕೂರಿನಲ್ಲಿ ಆತ ವಾಸ್ತವ್ಯ ಹೂಡಿದ್ದರ ಕುರಿತು ಪೊಲೀಸರು ಕೂಡಲೇ ತನಿಖೆ ನಡೆಸಿ, ವಾಸ್ತವಾಂಶ ತಿಳಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement