ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಾನಗರ ಪಾಲಿಕೆಗಾಗಿ 300 ಕೋಟಿ ಬಿಡುಗಡೆ

Rashmi Kasaragodu
Updated On : 4 Sept 2013, 1:18 am

ಕನ್ನಡಪ್ರಭ ವಾರ್ತೆ   ತುಮಕೂರು   ಸೆ.3
ಬಿಜೆಪಿ ಸರ್ಕಾರ ತುಮಕೂರು ನಗರಸಭೆಯನ್ನು ಮಹಾನಗರಪಾಲಿಕೆಯಾಗಿ 2010 ರಲ್ಲೇ ಮೇಲುದರ್ಜೆಗೇರಿಸಿತ್ತು. ಆದರೆ ಜನಸಂಖ್ಯೆ 3 ಲಕ್ಷ ದಾಟಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಮಹಾನಗರಪಾಲಿಕೆಯಾಗಿ ಉಳಿಸಿಕೊಳ್ಳಲಾಗಲಿಲ್ಲ ಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೋಗಡು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,  ಅಂದು ನಮ್ಮ ಸರ್ಕಾರ ಪಾಲಿಕೆಯಾದ ಹಿನ್ನೆಲೆಯಲ್ಲಿ 100 ಕೋಟಿ ರು. ಅನುದಾನ ಬಿಡುಗಡೆ ಕೂಡ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಮಹಾನಗರಪಾಲಿಕೆ ಲೆಕ್ಕದಲ್ಲೇ ನೋಡುವುದಾದರೆ ವರ್ಷಕ್ಕೆ 100 ಕೋಟಿ ರು. ನಂತೆ, 3 ವರ್ಷಗಳಿಗೆ 300 ಕೋಟಿ ರು. ಕಾಂಗ್ರೆಸ್ ಸರ್ಕಾರ ಬಾಕಿ ಹಣ ನೀಡಲಿ. ಈಗ ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆ ದರ್ಜೆಗೇರಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಹಾಗೆಯೇ ಹಳೇ ಬಾಕಿ 300 ಕೋಟಿ ರು. ಗಳನ್ನು ಕೂಡ ನೀಡಲಿ ಎಂದು ಸೊಗಡು ಒತ್ತಾಯಿಸಿದರು.
ಹಾಗೆಯೇ ಚುನಾವಣೆ, ವಾರ್ಡ್ ವಿಂಗಡಣೆ ಅನಿವಾರ್ಯವಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಲಿ. ಸರ್ಕಾರ ಕೂಡಲೇ ಕಾರ್ಯೋನ್ಮುಖವಾಗಲಿ ಎಂದು ಸೊಗಡು ಆಗ್ರಹಿಸಿದರು.
ಶಿರಾ ಉಸ್ತುವಾರಿ ಸಚಿವರು ಅಂತ ಹೇಳಲಾರೆ: ಜಿಲ್ಲೆಯ ಶಿರಾ, ಕಳ್ಳಂಬೆಳ್ಳ ಭಾಗಕ್ಕೆ ಮಾತ್ರ ಹೇಮಾವತಿ ಹರಿದರೆ ಸಾಕೆ, ತುಮಕೂರು ಜಿಲ್ಲೆಯ ಇತರೆ ತಾಲೂಕುಗಳಿಗೆ ಹೇಮಾವತಿ ಹರಿಯುವುದು ಬೇಡವೆ ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಮಾರ್ಮಿಕವಾಗಿ ಪ್ರಶ್ನಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆ ಕುಡಿಯಲು ಹೇಮಾವತಿ ನೀರನ್ನೇ ನೆಚ್ಚಿಕೊಂಡಿದೆ. ಇಷ್ಟೊತ್ತಿಗೆ ತುಮಕೂರಿನ ಬುಗುಡನಹಳ್ಳಿ, ಹೆಬ್ಬಾಕ, ಕುಣಿಗಲ್ ಸೇರಿದಂತೆ ಇತರೆ ತಾಲೂಕುಗಳ ಕೆರೆಗಳು ತುಂಬಬೇಕಾಗಿತ್ತು. ಆದರೆ ತುಂಬಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಶಿರಾ ಕ್ಷೇತ್ರದತ್ತ ಸ್ವಲ್ಪ ಹೆಚ್ಚು ಆಸ್ಥೆ ವಹಿಸಿರಬಹುದು. ನಾವು ಕೂಡ ಸರ್ಕಾರ ನಡೆಸಿರೋರು. ಯದ್ವಾ -ತದ್ವಾ ಮಾತಾಡೊಲ್ಲ. ಜಯಚಂದ್ರರನ್ನು ಶಿರಾ ಸಚಿವರು ಅಂತಾನೋ, ಶಿರಾ ಉಸ್ತುವಾರಿ ಸಚಿವರು ಅಂತಾನೋ ಹೇಳಲಾರೆ ಎಂದು ಸೊಗಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಕ್ರಮ ಮರಳು:  ಅಕ್ರಮ ಮರಳು ದಂಧೆ ತಡೆಗಟ್ಟುವ ಹಿನ್ನೆಲೆಯಲ್ಲಿ ಶಿರಾ ಹಾಗೂ ಮಧುಗಿರಿ ತಾಲೂಕುಗಳಿಗೆ ತನಿಖಾ ದಳ ಅತ್ಯಗತ್ಯ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯಪಟ್ಟರು.
ತಮ್ಮ ಮನೆ ಮುಂದೆಯೇ ಪ್ರತಿದಿನ ಸುಮಾರು 160 ಮರಳು ತುಂಬಿದ ಲಾರಿಗಳು ಓಡಾಡುತ್ತಿವೆ. ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಕೂಡ ಮರಳು ದಂಧೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಅಗತ್ಯ ಎಂದು ಹೇಳಿದ್ದರು. ಮರಳು ದಂಧೆಯಿಂದಾಗಿ ಅಂತರ್ಜಲ ಬತ್ತಿ, ನೀರಿಗಾಗಿ ಹಾಹಾಕಾರ ಏಳಲಿದೆ. ಮರಳು ದಂಧೆ ತಡೆಗಟ್ಟಲಿಕ್ಕಾಗದೇ ಇರುವುದು ದುರಂತವೇ ಸರಿ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಉಪೇಂದ್ರಕುಮಾರ್ ಎನ್ನುವ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ಗೋವುಗಳ ಅಕ್ರಮ ಸಾಗಣೆ, ಗೋ ಹತ್ಯೆ ಕುರಿತಂತೆ ಪ್ರಶ್ನಿಸಿದ್ದಕ್ಕೆ ರೌಡಿ ಪಟ್ಟಿಗೆ ಸೇರಿಸಿ ಬಂಧಿಸಲಾಗಿದೆ. ತುಮಕೂರಿನಲ್ಲಿ ಹಸುವೊಂದನ್ನು ಕದ್ದು, ಹತ್ಯೆ ಮಾಡಿ, ಚರ್ಮವನ್ನು ಸಾವಿರಾರು ರು. ಗಳಿಗೆ ಮಾರಾಟ ಮಾಡಿದ ಉದಾಹರಣೆ ಕೂಡ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲೇ ತಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಯತ್ನಿಸಿತ್ತು ಎಂದ ಸೊಗಡು, ಕೂಡಲೇ ಉಪೇಂದ್ರಕುಮಾರ್ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement