ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈತರ ಮೊಗದಲ್ಲಿ ನಗು ತರಲು ಮಳೆರಾಯ ಬಂದೇ ಬಿಟ್ಟ

Rashmi Kasaragodu
Updated On : 4 Sept 2013, 1:20 am

ತುರುವೇಕೆರೆ: ರೈತರ ಕಷ್ಟ ಕಂಡ ವರುಣದೇವನ ಕೃಪೆ ತೋರಿದ್ದಾನೆ. ಕಳೆದ ಒಂದೆರಡು ತಿಂಗಳಿನಿಂದ ವರುಣನಿಗಾಗಿ ಕಾಡಿ ಬೇಡಿದ್ದ ರೈತರ ಮೊರೆಗೆ ವರುಣದೇವ ಮರುಗಿದ್ದಾನೆ. ಸೋಮವಾರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ತುರುವೇಕೆರೆ (ಕಸಬಾ) ಹೋಬಳಿಗೆ ಸುಮಾರು 32.2 ಮಿ.ಮಿ ಮಳೆಯಾಗಿದೆ. ದಂಡಿನಶಿವರಕ್ಕೆ 30 ಮಿ.ಮಿ, ಮಾಯಸಂದ್ರಕ್ಕೆ 7.3 ಮಿ ಮಿ, ದಬ್ಬೇಘಟ್ಟಕ್ಕೆ 40.8 ಮಿ ಮಿ, ಸಂಪಿಗೆಗೆ 3 ಮಿ. ಮಿ. ಮಳೆಯಾಗಿದೆ. ಮಳೆಯಿಲ್ಲದೆ ಬಿರುದು ಬಾಯಿ ಬಿಟ್ಟಿದ್ದ ಹಲವಾರು ಹೊಂಡಗಳಲ್ಲಿ ಒಂದಿಷ್ಟು ಮಳೆ ನೀರು ನಿಂತಿದೆ. ಮೊಳಕೆಯೊಡೆದಿದ್ದ ಹಲವಾರು ಬೇಳೆ ಕಾಳುಗಳ ಗಿಡಗಳು ಮಳೆಯ ಸಿಂಚನದಿಂದಾಗಿ ಸಂತಸಗೊಂಡಿವೆ. ಅಂತೂ ವರುಣ ದೇವ ಕೃಪೆ ತೋರಿದ್ದರಿಂದ ರೈತರ ಮೊಗದಲ್ಲೂ ಸಂತಸ ಕಾಣಬಹುದಾಗಿದೆ. ಬೆಳೆದಿದ್ದ ಬೆಳೆಗಳು ಹೋಗೇ ಬಿಟ್ಟಿತು ಎಂಬ ವೇಳೆಗೆ ಸ್ವಲ್ಪ ಜೀವ ಬಂತಾಗಿದೆ. ಮಂಗಳವಾರವೂ ಸಹ ವರುಣನ ಸಿಂಚನ ಮುಂದುವರೆದಿತ್ತು. ಜಾನುವಾರುಗಳಿಗೆ ಒಂದಿಷ್ಟು ಕುಡಿಯುವ ನೀರು ಸಿಕ್ಕಂತಾಗಿದೆ. ಈ ವರ್ಷದಲ್ಲಿ ಇಂತಹ ಮಳೆಯನ್ನೇ ಕಾಣದ ರೈತರಿಗೆ ಈ ಮಳೆ ಖುಷಿ ತಂದಿದೆ. ಪತ್ರಿಕೆ ತಾಲೂಕಿನಲ್ಲಿ ಮಳೆ ಇಲ್ಲದೇ ಬರಡಾಗುತ್ತಿರುವ ಗಿಡ ಮರಗಳ ಕುರಿತು ವರದಿ ಮಾಡಲಾಗಿತ್ತು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement