ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವೆಂಕಟರಮಣಪ್ಪ ಆಕಾಂಕ್ಷಿ
ಪಾವಗಡ: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ವೀಕ್ಷಕರಾಗಿ ಪಾವಗಡಕ್ಕೆ ಆಗಮಿಸಿದ್ದ ವೀಕ್ಷಕರ ತಂಡ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಮಾಜಿ ಸಚಿವ ವೆಂಕಟರಮಣಪ್ಪ ಸೇರಿದಂತೆ ಸುಮಾರು 28 ಮಂದಿ ಆಕಾಂಕ್ಷಿಗಳು ಅರ್ಜಿ ನೀಡಿದ್ದಾರೆ ಎಂದು ವೀಕ್ಷಕ, ಮಾಜಿ ಸಚಿವ ನಜೀರ್ ಆಹಮ್ಮದ್ ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಅವರು ಪಟ್ಟಣದ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆಗೆ ಸ್ವರ್ಧಿಸಲು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ತಾಲೂಕಿನಿಂದ ಮಾಜಿ ಸಚಿವ ವೆಂಕಟರಮಣಪ್ಪ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದು ಅವರಿಗೆ ಟಿಕೆಟ್ ನೀಡುವಂತೆ ಮುಖಂಡರು ಸೇರಿದಂತೆ ಅನೇಕ ಮಂದಿ ಕಾರ್ಯಕರ್ತರು ವೀಕ್ಷಕರಿಗೆ ಒತ್ತಾಯಿಸಿದರು. ನಂತರ ಚಳ್ಳಕೆರೆ ತಾ. ನೇರಳೇಕುಂಟೆ ಗ್ರಾಮದ ಎಂ.ರಾಮಪ್ಪ ತುಮಕೂರು ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚಮಾರಯ್ಯ, ಹಿರಿಯೂರು ತಾ. ನಿವೃತ್ತ ಐಎಎಸ್ ಅಧಿಕಾರಿ ಭೀಮಯ್ಯ, ಚಿತ್ರದುರ್ಗ ಟೌನಿನ ಕೇಶವಮೂರ್ತಿ ಸೇರಿದಂತೆ ಸುಮಾರು 28 ಮಂದಿ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಅರ್ಜಿ ಸಲ್ಲಿಸಿ ದರು.