ವಿಶೇಷ ಉಪನ್ಯಾಸಕ್ಕೆ ಅನುದಾನ
ತುಮಕೂರು: ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಭೌತಶಾಸ್ತ್ರದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲು ತುಮಕೂರು ವಿಶ್ವ ವಿದ್ಯಾಲಯಕ್ಕೆ ಈಗಾಗಲೇ ಒಂದು ರು. ಲಕ್ಷದ 14 ಸಾವಿರ ಬಿಡುಗಡೆ ಮಾಡಿದೆ. ಈ ಸಂಬಂಧ 3 ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿ, ಒಟ್ಟು 12 ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಡಾ.ಎ.ಎಚ್. ರಾಜಾಸಾಬ್ ತಿಳಿಸಿದರು.
ಸರ್ಕಾರ ಒಪ್ಪಿದಲ್ಲಿ ಲೋಗೋ ಮರುಸ್ಥಾಪನೆ
ತುಮಕೂರು: ಸರ್ಕಾರ ಒಪ್ಪಿದಲ್ಲಿ ಹೊಸ ಲೋಗೋ ಬದಲಾವಣೆ ಮಾಡಿ, ಹಳೇ ಲೋಗೋ ಮರುಸ್ಥಾಪಿಸುವ ಭರವಸೆಯನ್ನು ತುಮಕೂರು ವಿವಿ ನೂತನ ಕುಲಪತಿ ಡಾ.ಎ.ಎಚ್. ರಾಜಾಸಾಬ್ ನೀಡಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ವಿವಿ ಹಳೇ ಲೋಗೋ ಮರುಸ್ಥಾಪಿಸಲು ತಮ್ಮ ಅಭ್ಯಂತರವೇನೂ ಇಲ್ಲ. ಲೋಗೋ ಯಾಕಾಗಿ ಬದಲಾವಣೆಯಾಗಿದೆ ಎಂಬ ಬಗ್ಗೆ ಮಾಹಿತಿಯೂ ಇಲ್ಲ. ಸರ್ಕಾರ ಒಪ್ಪಿದಲ್ಲಿ ಹಳೆಯ ಲೋಗೋ ಮರುಸ್ಥಾಪಿಸುವುದಾಗಿ ತಿಳಿಸಿದರು.