ಶ್ರೀ ಪದ್ಧತಿಯಿಂದ ಅಧಿಕ ಲಾಭ'
ತಿಪಟೂರು: ತಾಲೂಕಿನ ಬಜಗೂರು ವಲಯದ ಮಾಚಘಟ್ಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಶ್ರೀಪದ್ದತಿ ತರಬೇತಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಪಿ.ಶ್ರೀನಿವಾಸ್ ಇತ್ತೀಚಿನ ದಿನಗಳಲ್ಲಿ ರೈತರು ಕೃಷಿ ಬಗ್ಗೆ ಕಾಳಜಿ ವಹಿಸದೇ ಪುರಾತರ ಮಾದರಿಯ ಕೃಷಿ ವಿಧಾನಗಳನ್ನು ಬಳಕೆ ಮಾಡುತ್ತಿರುವುದರಿಂದ ಅಧಿಕ ಖರ್ಚು ಮಾತ್ರವಲ್ಲ ಹೆಚ್ಚಿನ ಇಳುವರಿಯನ್ನು ಪಡೆಯಲು ಪರದಾಡುತ್ತಿದ್ದಾರೆ. ಆದ್ದರಿಂದ ರೈತರು ಶ್ರೀಪದ್ದತಿ ಅಳವಡಿಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಿಂದ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀಪದ್ದತಿಯ ಪ್ರಾತ್ಯಕ್ಷಿಕೆ ಮಾಹಿತಿಯನ್ನು ಕೃಷಿ ಮೇಲ್ವಿಚಾರಕಿ ನಂದಿತಾ ನೀಡಿದರು. ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.