ತಿಪಟೂರಿನ ಪದವಿ ವಿದ್ಯಾರ್ಥಿಗಳ ಆಯ್ಕೆ
ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನಲ್ಲಿ ವಿಶ್ವ ಮಾನವ ಯುವ ವೇದಿಕೆಯಿಂದ ನಡೆದ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಶ್ಚಾತ್ಯ ನೃತ್ಯ ಹಾಗೂ ಕುವೆಂಪು ರಚಿಸಿದ ಹಾಡಿನ ನೃತ್ಯ ಸ್ಪರ್ಧೆಯಲ್ಲಿ ತೃತಿಯ ಬಹುಮಾನ ಹಾಗೂ ವಿದ್ಯಾರ್ಥಿ ಗೊಟ್ಟಿಕೆರೆ ಭೈರೇಶ್ ನಿರ್ದೇಶನದ ಕಾಲಾಯ ತಸ್ಮೈ ನಮಃ ನಾಟಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ದಶಾವತಾರ ನೃತ್ಯ ಹಾಗೂ ನಾಟಕವನ್ನು ಸೆ.30 ಮತ್ತು 31ರಂದು ಮೈಸೂರಿನಲ್ಲಿ ನಡೆಯಲಿರುವ ಯುವ ಸಂಭ್ರಮ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರದರ್ಶಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯದೇವಪ್ಪ, ಪ್ರಾಧ್ಯಾಪಕ ಕುಮಾರಸ್ವಾಮಿ, ನೃತ್ಯ ನಿರ್ದೇಶಕ ರವಿಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.