ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ತುಮಕೂರು: ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಾಟಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕೆಳಕಂಡ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ತುಮಕೂರಿನ ಬೈರವೈಶ್ವರ ಪ್ರೌಢಶಾಲೆಯ ಪಿ. ಪ್ರಸಾದ್, ಚಿಕ್ಕನಾಯಕನಹಳ್ಳಿ ಕೆಂಕೆರೆಯ ಸಪಪೂ ಕಾಲೇಜಿನ ವಿದ್ಯಾಕುಂಚನೂರ, ಗುಬ್ಬಿ ತಾಲೂಕು ಹಾಗಲವಾಡಿ ವಿನಾಯಕ ಪಿಯೂ ಕಾಲೇಜಿನ ಎಸ್.ನರಸಿಂಹರಾಜು ತಿಪಟೂರು ತಾಲೂಕು ತಡಸೂರು ಸರ್ಕಾರಿ ಪ್ರೌಢಶಾಲೆಯ ಬಿ.ವೆಂಕಟೇಶ್ ತುರುವೇಕೇರೆ ಸರಸ್ವತಿ ಬಾಲಿಕಾ ಪ್ರೌಢಶಾಲೆಯ ಎಂ.ಆರ್.ತಿರುಮಲೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ವಿಭಾಗ ದಲ್ಲಿ ಚಿ.ನಾ.ಹಳ್ಳಿಯ ವೈ. ನಾಗರಾಜು, ಗುಬ್ಬಿ ತಾಲೂಕು ಕಚ್ಚೇನಹಳ್ಳಿಯ ಇಂದ್ರಮ್ಮ, ತಿಪಟೂರು ತಾಲೂಕು ಉಪ್ಪಿನಹಳ್ಳಿಯ ಜಿ.ಕೆ. ಶ್ರೀರಾಮಯ್ಯ, ಕುಣಿಗಲ್ ಜನತಾ ಕಾಲೋನಿಯ ಕೆ.ಸಿ. ಚಂದ್ರಕುಮಾರ್, ತುಮಕೂರು ಗ್ರಾಮಾಂತರ ತಾಲೂಕು ಹೊನ್ನುಡಿಕೆಯ ಹೊನ್ನಯ್ಯ, ತುರುವೇಕೆರೆ ಶ್ರೀರಾಮಪುರದ ಟಿ.ಆರ್. ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.