ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯರು 21 ನೇ ಶತಮಾನ ಮುನ್ನಡೆಸಬೇಕು

Mainashree
Updated On : 5 Sept 2013, 11:00 am

ಕ.ಪ್ರ.ವಾರ್ತೆ  ತುಮಕೂರು  ಸೆ.5
21 ನೇ ಶತಮಾನ ಭಾರತೀಯರ ಯುಗ. ಈ ಯುಗವನ್ನು ಮಹಿಳೆಯರು ಮುನ್ನಡೆಸಬೇಕು ಎಂದು ಕಾನೂನು ಹಾಗೂ ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಎಂಪ್ರೆಸ್ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕಷ್ಣನ್ ಅವರ 126 ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ 11 ಮಂದಿ ಉತ್ತಮ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.
ಅಭಿವೃದ್ಧಿಯ ಮೂಲಮಂತ್ರ ಶಿಕ್ಷಣ ಎನ್ನುವುದನ್ನು ಮರೆಯಬಾರದು. ಶೈಕ್ಷಷಣಿಕ ಪ್ರಗತಿಯಿಂದ ಮಾತ್ರ ಪರಿವರ್ತನೆ ಸಾಧ್ಯಯ. ಶಿಕ್ಷಣ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬದಲಾವಣೆಯಿಂದ ಇಡೀ ಪ್ರಪಂಚ ಭಾರತದತ್ತ ನೋಡುವಂತಾಗಿದೆ ಎಂದರು.
21 ನೇ ಶತಮಾನ ಭಾರತೀಯರ ಯುಗ. ಮಹಿಳೆಯರು ಈ ಯುಗವನ್ನು ಮುನ್ನಡೆಸಬೇಕು. ಇದರ ರೂವಾರಿಗಳು ಶಿಕಕ್ಷಕರೇ. ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆಗಳಾಗಬೇಕಿದೆ. ಇದಕ್ಕೆ ಎಲ್ಲರೂ ಹೊಂದಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಬೇಕು ಎನ್ನುವುದಾಗಿದೆ. ಸರ್ವ ಶಿಕ್ಷಣ ಅಭಿಯಾನ, ಆರ್‌ಟಿಇ ಸೇರಿದಂತೆ ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಶೈಕ್ಷಣಿಕ ಪ್ರಗತಿಯಿಂದ ಪರಿವರ್ತನೆ ಸಾಧ್ಯ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಹೇಳಿದರು.
ಶಿಕ್ಷಣದ ಮಟ್ಟ ಉತ್ತಮವಾಗಿದೆ. ಆದರೆ ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಕಾಣುತ್ತಿದೆ. ಇದನ್ನು ತೊಡೆದು ಹಾಕಲು ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಸದೃಢ ಮಕ್ಕಳ ನಿರ್ಮಾಣಕ್ಕೆ ಇದು ಸಹಕಾರಿಯಾಗಿದೆ. ಅಲ್ಲದೆ ಶಿಕ್ಷಣದಲ್ಲಿ ಬದಲಾವಣೆ ತರಲು ಶಿಕ್ಷಕರಿಂದ ಸಾಧ್ಯವಾಗಿದೆ ಎಂದರು.
ಶಾಸಕ ಡಾ.ರಫೀಕ್ ಅಹ್ಮದ್ಸ್‌ಮಾರಂಭದ ಅಧ್ಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ  ಡಾ.ಎಂ.ಆರ್.ಹುಲಿನಾಯ್ಕರ್, ಜಿಪಂ ಅಧ್ಯಕ್ಷೆ ಪ್ರೇಮಾಮಹಾಲಿಂಗಪ್ಪ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಪಂ ಸಿಇಒ ಗೋವಿಂದರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಪಿಯು ಉಪನಿರ್ದೇಶಕ ಜಯಪ್ರಕಾಶ್, ಡಯಟ್ ಉಪನಿರ್ದೇಶಕ ಈಶ್ವರಯ್ಯ, ಡಿಡಿಪಿಐ ಬಿ.ಮೋಹನ್ ಕುಮಾರ್, ಬಿಇಒ ಬಿ.ಎಸ್.ಕುಮುದಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement