ಸಿದ್ಧಗಂಗಾ ವಿದ್ಯಾರ್ಥಿಗಳು ಚಾಂಪಿಯನ್
ತುಮಕೂರು: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಚಾಂಪಿಯನ್ ಆಗಿದಿದ್ದಾರೆ.
ರಂಗಗೀತೆಯಲ್ಲಿ ಪ್ರಥಮ, ಜನಪದ ಗೀತೆ, ಕನ್ನಡ ಚಿತ್ರಗೀತೆಯಲ್ಲಿ ದ್ವಿತೀಯ ಮತ್ತು ಹಿಂದಿ ಚಿತ್ರಗೀತೆ, ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ ತೃತಿಯ ಬಹುಮಾನವನ್ನು ವಿದ್ಯಾರ್ಥಿಗಳು ಗಳಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಬಿ.ಎಲ್. ವೈದ್ಯೇಶ್ವರ ಅವರ ಮಾರ್ಗದರ್ಶನದಲ್ಲಿ ಪ್ರೊ.ಆರ್.ಎಸ್. ಸುರೇಶ್ ಮತ್ತು ಪ್ರೊ. ಎಸ್.ವಿ. ರುದ್ರಮನಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ. ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಶಿವಕುಮಾರಸ್ವಾಮೀಜಿ ಅವರು ಅಭಿನಂದಿಸಿದರು.