ಹಾಲಿನ ಪುಡಿ ನೀಡುತ್ತಿರುವುದು ವರದಾನ: ಸೋಮಸುಂದರ್
ಕ.ಪ್ರ.ವಾರ್ತೆ ಮಧುಗಿರಿ ಸೆ. 5
ಮಕ್ಕಳಲ್ಲಿ ಪೌಷ್ಟಿಕತೆ ವೃದ್ಧಿಗೊಳಿಸಲು ಸರ್ಕಾರ ಹಾಲಿನ ಪುಡಿ ನೀಡುತ್ತಿರುವುದು ವರದಾನ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಸುಂದರ್ ತಿಳಿಸಿದರು.
ತಾಲೂಕಿನ ಬ್ಯಾಲ್ಯ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲಿನ ಪುಡಿಯಿಂದ ಹಾಲು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿತೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಕಿಮ್ ಹಾಲಿನ ಪುಡಿ ಮತ್ತು ಬೆಚ್ಚನೆ ನೀರನ್ನು 1.1 ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು. ಮಿಶ್ರಣ ಮಾಡುವಾಗ ಯಾವುದೇ ಗಂಟಿಲ್ಲದಂತೆ ಬೆರಸಿ ನೀರಿನ ಪ್ರಮಾಣದ 4 ಪಟ್ಟು ನೀರನ್ನು ಮತ್ತೆ ಬೆರಸಿ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕಾಯಿಸಿ ಮಕ್ಕಳಿಗೆ ವಿತರಿಸಬೇಕು. ಎಂದು ತಿಳಿಸಿದರು. ಡಾ. ಭಾನುಪ್ರಕಾಶ್, ಮೇಲ್ವಿಚಾರಕಿ ಶಿವಲೀಲಾ ಹಾಗೂ ಈ ಭಾಗದ ಅಂಗನವಾಡಿ ಎಲ್ಲ ಕಾರ್ಯಕರ್ತೆಯರು ಭಾಗವಹಿಸಿದ್ದರು.