ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿರಾ ತಾಲೂಕಿನ ವಿವಿಧೆಡೆ ಮಳೆ: ತುಂಬಿದ ಕೆರೆಕಟ್ಟೆ

Rashmi Kasaragodu
Updated On : 7 Sept 2013, 12:57 pm

ಶಿರಾ: ಕಳೆದ 2 ದಿವಸಗಳಿಂದ ತಾಲೂಕಿನ ವಿವಿಧೆಡೆ ಬಂದ ಮಳೆಯಿಂದಾಗಿ ಹಲವು ಕೆರೆ ಕಟ್ಟೆಗಳು ಶೇ. 80 ರಷ್ಟು ತುಂಬಿದ್ದು ಮತ್ತೆ ಹಲವು ಕೆರೆಗಳು ಅಪಾಯದ ಅಂಚಿನಲ್ಲಿವೆ. ತಾಲೂಕಿನ ಹುಲಿಕುಂಟೆ ಹೋಬಳಿಯಲ್ಲಿ ಕಳೆದ 2 ದಿನಗಳಿಂದ ಉತ್ತಮ ಮಳೆಯಾದ ಪರಿಣಾಮ ಹಲವು ಕೆರೆ ತುಂಬಿದ್ದು ಕಾರೇಹಳ್ಳಿ ಕೆರೆಗೂ ನೀರು ಬಂದು ಅಪಾಯದ ಅಂಚನ್ನು ಕಂಡ ಅಧಿಕಾರಿಗಳು ನೀರು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  ಇದೇ ಹುಲಿಕುಂಟೆ ಹೋಬಳಿಯ ಚಿಕ್ಕ ಹುಲಿಕುಂಟೆ, ಗೋಪಿಕುಂಟೆ, ದೊಡ್ಡ ಹುಲಿಕುಂಟೆ ಕೆರೆಗಳು ಶೇ. 60 ರಷ್ಟು ತುಂಬಿವೆ. ತಾಲೂಕಿನ ಕೊಟ್ಟಿ ಕೆರೆಯೂ ಕೂಡ ತುಂಬಿದ್ದು, ಮತ್ತೆ ಹಲವು ಕೆರೆ ಕಟ್ಟೆಗಳು ಮಳೆಯ ನೀರಿನಿಂದ ತುಂಬಿವೆ. ಹಲವು ಕೆರೆಗಳಿಗೆ ಅಲ್ಪ ಪ್ರಮಾಣದ ಮಳೆ ನೀರು ಬಂದಿದೆ. ತಾಲೂಕಿನ ಕಳ್ಳಂಬೆಳ್ಳ, ಬುಕ್ಕಾಪಟ್ಟಣ, ಗೌಡಗೆರೆ, ಭಾಗದಲ್ಲಿ ಹೆಚ್ಚಿನ ಮಳೆ ಬೀಳದ ಪರಿಣಾಮ ಕೆರೆಗಳಿಗೆ ನೀರು ಶೇಖರಣೆಯಾಗಿಲ್ಲ. ಸದರಿ ಮಳೆಯಿಂದಾಗಿ ಈಗಾಗಲೇ ಕೆಲವು ರೈತರು ಬಿತ್ತಿನೆ ಬೀಜಗಳನ್ನು ಬಿತ್ತಿದ್ದು, ಶೇ. 40 ರಷ್ಟು ರೈತರಿಗೆ ಸದರಿ ಮಳೆಯಿಂದ ಅನುಕೂಲವಾದಂತಾಗಿದೆ.
ರಸ್ತೆ ರಿಪೇರಿ: ಕಳೆದ 2 ದಿನಗಳಿಂದ ತಾಲೂಕಿನ ಕೊಟ್ಟಿ ಗ್ರಾಮದಲ್ಲಿ ಮಳೆಯಾಗಿದ್ದು ರಸ್ತೆಯೂ ಶಿಥಿಲಗೊಂಡಿದೆ. ಕೊಟ್ಟಿ-ಕೊಟ್ಟಿ ಪಾಳ್ಯದ ರಸ್ತೆ ಸಂಚರಿಸಲು ಅಸಮರ್ಥವಾಗಿದ್ದು ಕೂಡಲೇ ಸಂಬಂಧಪಟ್ಟವರು ರಸ್ತೆ ದುರಸ್ತಿ ಮಾಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದೂರವಾಣಿ ಅದಾಲತ್
ತುಮಕೂರು: ಬಿ.ಎಸ್.ಎನ್.ಎಲ್.ನ ತುಮಕೂರು ದೂರಸಂಪರ್ಕ ಮಹಾಪ್ರಬಂಧಕರ ಕಚೇರಿಯಲ್ಲಿ ಸೆ.19 ರಂದು ಬೆಳಿಗ್ಗೆ 11 ಗಂಟೆಗೆ ದೂರವಾಣಿ ಅದಾಲತ್  ನಡೆಯಲಿದೆ. ಅದಾಲತ್ಗೆ ಅರ್ಜಿ ಸಲ್ಲಿಸುವ ಮೊದಲು ಕುಂದುಕೊರತೆ ನಿವಾರಣೆಗೆ ಎಲ್ಲಾ ಸಾಮಾನ್ಯ ಮಾರ್ಗಗಳನ್ನು  ಕೈಗೊಂಡಿರಬೇಕು.  ಸಮಸ್ಯೆಯ ಪೂರ್ಣ ವಿವರಗಳನ್ನೊಳಗೊಂಡ ಅರ್ಜಿಗಳನ್ನು  ಕಿರಿಯ ದೂರಸಂಪರ್ಕ ಅಧಿಕಾರಿ (ಪಿ.ಆರ್.), ಮಹಾಪ್ರಬಂಧಕರ ಕಚೇರಿ, ಬಿ.ಎಸ್.ಎನ್.ಎಲ್., ಅಶೋಕರಸ್ತೆ, ತುಮಕೂರು-ಇವರಿಗೆ ಸೆ.16 ರೊಳಗೆ ತಲುಪುವಂತೆ ಕಳುಹಿಸಬೇಕು.  ಲಕೋಟೆಯ ಮೇಲೆ ದೂರವಾಣಿ ಅದಾಲತ್ಗೆ ಅರ್ಜಿ ಎಂದು ನಮೂದಿಸಿರಬೇಕು ಎಂದು ದೂರಸಂಪರ್ಕ ಮಹಾಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತುಮಕೂರಿಗೆ ರವಿವರ್ಮ ಕುಮಾರ್
ತುಮಕೂರು: ರಾಜ್ಯದ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ತುಮಕೂರಿನ ವಕೀಲರ ಸಂಘಕ್ಕೆ ಸೆ.7 ರಂದು ಶನಿವಾರ ಆಗಮಿಸಲಿದ್ದಾರೆ. ಸಂಘದ ವತಿಯಿಂದ ಇವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement