ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾನೂನು ಸಚಿವರಿಗೆ ನೆನಪು ಮಾಡಿದ ಜಿಲ್ಲಾ ನ್ಯಾಯಾಧೀಶರು

Rashmi Kasaragodu
Updated On : 8 Sept 2013, 12:27 pm

ತುಮಕೂರು: ತುಮಕೂರು ಜಿಲ್ಲಾ ನ್ಯಾಯಾಲಯಗಳ ಮೂಲಭೂತ ಸಮಸ್ಯೆ, ಸಿಬ್ಬಂದಿ ಸಮಸ್ಯೆ ಕುರಿತಂತೆ ಈಗಾಗಲೇ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂಬುದನ್ನು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಎಚ್.ಬಿ. ಪ್ರಭಾಕರಶಾಸ್ತ್ರಿ ನೆನಪಿಸಿದ ಪ್ರಸಂಗ ನಡೆಯಿತು. ಸಮಸ್ಯೆ ಕುರಿತು ಮನವಿ ಸಲ್ಲಿಸಿದಲ್ಲಿ ಸ್ಪಂದಿಸಲು, ಸಮಸ್ಯೆ ಬಗೆಹರಿಸಲು ಸಿದ್ಧ ಎಂಬ ಕಾನೂನು ಸಚಿವರ ಹೇಳಿಕೆಗೆ ಸಭೆಯಲ್ಲೇ ಮೇಲಿನಂತೆ ಉತ್ತರ ನೀಡಿದರು. ಜಯಚಂದ್ರ ಕೂಡ ಪ್ರಭಾಕರಶಾಸ್ತ್ರಿಯವರ ಮಾತನ್ನು ಒಪ್ಪಿದರು. ಈ ಮೂಲಕ ಈ ಹಿಂದೆಯೇ ಸಮಸ್ಯೆ ಕುರಿತ ಮನವಿ ಪತ್ರ ಸ್ವೀಕರಿಸಿದ್ದಾಗಿ ಒಪ್ಪಿಕೊಂಡರು. ಜತೆಗೆ ವಕೀಲರ ಸಂಘದ ವತಿಯಿಂದ ಮತ್ತೆ ಮನವಿ ಪತ್ರ ನೀಡುವ ಅಗತ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement