ಕೆ.ಟಿ.ಹಳ್ಳಿ ಗ್ರಾಪಂನ ಉಪಾಧ್ಯಕ್ಷ ದಲಿತ್ ಕುಮಾರ್
ಪಾವಗಡ: ತಾಲೂಕಿನ ಕೆ.ಟಿ.ಹಳ್ಳಿ ಗ್ರಾಪಂನ ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆದು ದಲಿತ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರ ಸಂಬಂಧಿ ದಲಿತ್ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮತ್ತು ಎಲ್ಲಾ ಗ್ರಾಪಂ ಸದಸ್ಯರಿಗೆ ನೂತನ ಉಪಾಧ್ಯಕ್ಷ ದಲಿತ್ ಕುಮಾರ್ ಸೇರಿದಂತೆ ಯುವ ಮುಖಂಡರಾದ ಕೆ.ಟಿ.ಹಳ್ಳಿ ಮಂಜುನಾಥ್ ನೀಲಾ ನಾಗರಾಜ್, ಜಾಲೋಡು ವೈ.ಪರಮೇಶ್ ಮುಂತಾದವರು ಕೃತಜ್ಞತೆ ಸಲ್ಲಿಸಿದ್ದಾರೆ.