ಚಿರುಮುರಿ ರಘು
ಹುಳಿಯಾರು: ಚಿರುಮುರಿ, ಬೋಂಡ ಹಾಗೂ ಸಿಹಿ ತಿಂಡಿ ಅಂಗಡಿ ಮೂಲಕ ಹೆಸರುವಾಸಿಯಾಗಿದ್ದ ಚಿರುಮುರಿ ರಘು ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಇಲ್ಲಿನ ಬ್ರಾಹ್ಮಣರ ಬೀದಿಯಲ್ಲಿನ ಜಯಶ್ರೀ ಕಾಂಡಿಮೆಂಟ್ಸ್ ಮಾಲೀಕರಾದ ಅವರು ಭಜನ ಸಂಘಗಳಲ್ಲೂ ಪಕ್ಕವಾದ್ಯಗಾರರಾಗಿ ಗುರುತಿಸಿಕೊಂಡಿದ್ದರು. ವಿಶ್ವಹಿಂದೂ ಪರಿಷತ್, ಆರೆಸ್ಸೆಸ್ನಲ್ಲೂ ಸಕ್ರಿಯವಾಗಿದ್ದರು.ಕಳೆದ ಇಪ್ಪತ್ತು ದಿನಗಳ ಹಿಂದೆ ಅಸ್ವಸ್ಥರಾಗಿ ಹೆಬ್ರಿ ಸಮೀಪದ ಬೆಳ್ವೆ ಗ್ರಾಮದಲ್ಲಿ ಚಿಕಿತ್ಸೆಗೆಂದು ತೆರಳಿದ್ದ ಇವರು ಶನಿವಾರ ಮುಂಜಾನೆ ನಿಧನರಾದರು. ಅವರಿಗೆಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ಸಂಜೆ ಬೆಳ್ವೆ ಗ್ರಾಮದಲ್ಲಿ ನಡೆಯಿತು. ಚಿರುಮುರಿ ರಘು ಅವರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.