ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಕೀಲರಿಗೆ ಪಿಐಎಲ್ ನೆನಪಿಸಿದ ಪ್ರೊ, ರವಿವರ್ಮ ಕುಮಾರ್

Rashmi Kasaragodu
Updated On : 8 Sept 2013, 12:28 pm

ತುಮಕೂರು: ತುಮಕೂರು ಜಿಲ್ಲಾ ವಕೀಲರಿಗೆ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇದೆ ಎಂಬುದನ್ನು ನೆನಪಿಸಿದ ಘಟನೆ ನಡೆಯಿತು. ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರೊ. ರವಿವರ್ಮಕುಮಾರ್ ಹಾಗೂ ಕಾನೂನು ಸಚಿವರಿಗೆ ಏರ್ಪಾಟಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ತುಮಕೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇತರೆ ಸರ್ಕಾರಿ ಕಚೇರಿಗಳು ನ್ಯಾಯಾಲಯ ಆವರಣದ ಜಾಗ ಒತ್ತುವರಿ ಮಾಡಿಕೊಂಡಿರುವುದರ ಕುರಿತು ಹಾಗೂ ಅವುಗಳನ್ನು ಸ್ಥಳಾಂತರಿಸುವುದರ ಕುರಿತಂತೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ವಕೀಲರು ದೂರು ನೀಡಿದರು. ಸಚಿವರೂ ಸಹ ವಕೀಲರ ಮಾತಿಗೆ ಪುಷ್ಟಿ ನೀಡುವಂತೆ ಮಾತನಾಡಿದರು. ಆದರೆ ಪ್ರೊ ರವಿವರ್ಮಕುಮಾರ್, ವಕೀಲರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದನ್ನೇ ಮರೆತಂತಿದೆ. ನಿಮ್ಮ ಆಸ್ತಿ ಉಳಿಸಿಕೊಳ್ಳಲು ಯಾರದೇನು ಅಭ್ಯಂತರವಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಿ. ನಿಮ್ಮ ಆಸ್ತಿ ಹಿಂಪಡೆಯಿರಿ. ಯಾರದೇನು ಮುಲಾಜು. ನಿಮ್ಮ ವಿರುದ್ದ ಹೋರಾಡಲು ಯಾರಿದ್ದಾರೆ. ಧೈರ್ಯವಾಗಿ ಮುನ್ನಡೆಯಿರಿ. ದೇಶ ನಿರ್ಮಾಣ ಮಾಡಿದ್ದು 12 ಮಂದಿ ವಕೀಲರು. ಅವರಲ್ಲಿ ಮಹಾತ್ಮಗಾಂಧಿ, ಡಾ. ಅಂಬೇಡ್ಕರ್, ಸರ್ದಾರ್ ಪಟೇಲ್ ಸೇರಿದಂತೆ ದಂಡೇ ಇದೆ. ಈ ವಿಷಯ ಎಂದೂ ಮರೆಯದಿರಿ ಎಂದು ಮಾರ್ಮಿಕವಾಗಿ ನುಡಿದರು.
ದೇಶಕ್ಕೆ ಮಾದರಿಯಾಗಲಿ: ಕಾನೂನು ಸಚಿವರು ದೇಶದಲ್ಲೇ ಉತ್ತಮ ನ್ಯಾಯಾಲಯ ಸಂಕೀರ್ಣವನ್ನು ಜಿಲ್ಲೆಯಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ನಿರ್ಮಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಲಿ. ಹಿಡಿದ ಕೆಲಸವನ್ನು ಉಡದಂತೆ ಪಟ್ಟು ಹಿಡಿದು ಮಾಡುವ ವ್ಯಕ್ತಿ ಜಯಚಂದ್ರ. ಕ್ರಿಯಾಶೀಲ ವ್ಯಕ್ತಿ. ಹೇಮಾವತಿ ನೀರನ್ನು ಶಿರಾಕ್ಕೆ ಹರಿಸಿದ್ದೇ ಜಯಚಂದ್ರರ ಕ್ರಿಯಾಶೀಲತೆಗೆ ಸಾಕ್ಷಿ. ಇಂತಹ ವ್ಯಕ್ತಿ ಈಗ ಕಾನೂನು ಸಚಿವರು. ಅವರ ನೆರವು ಪಡೆದು ಜಿಲ್ಲಾ ವಕೀಲರ ಸಂಘ, ನ್ಯಾಯಾಲಯದ ಮೂಲಭೂತ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement