ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹ
ಮಧುಗಿರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಬೇಡಿಕೆ ಈಡೇರಿಸುಂತೆ ಆಗ್ರಹಿಸಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮನವಿ ಅರ್ಪಿಸಿದರು. ಈಗ್ಗೆ 12 ವರ್ಷ ಅನೇಕ ಶಿಕ್ಷಕರು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದು ನಮಗೆ ಸೇವಾ ಭದ್ರತೆ ಇಲ್ಲದೆ ಪರದಾಡುತ್ತಿದ್ದೇವೆ. ಹಾಗಾಗಿ ಸರ್ಕಾರ ಇತ್ತ ಗಮನ ಹರಿಸಿ ನಮ್ಮ ಸೇವೆ ಪರಿಗಣಿಸಿ ನಮ್ಮನ್ನು ಕಾಯಂ ಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು. ಯುಜಿಸಿ ನಿಯಮಾನುಸಾರ ಮಾಸಿಕ 25 ಸಾವಿರ ರು.ವೇತನ ನಿಗದಿ ಪಡಿಸಬೇಕು. ವರ್ಷದ 12 ತಿಂಗಳು ಮೊದಲ ವಾರದಲ್ಲೇ ವೇತನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಶಾಸಕ ರಾಜಣ್ಣನವರಿಗೆ ಮನವಿ ನೀಡಿದರು. ಸಿ.ಕುಮಾರ, ಶಿವಕುಮಾರ,ನರೇಶ, ಮಂಜುನಾಥ, ಮಾರುತಿ ಮೊದಲಾದವರು ಉಪಸ್ಥಿತರಿದ್ದರು.