ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಪ್ಪೂರು ಕೃಷ್ಣಮೂರ್ತಿ ನಿಧನದಿಂದ ಅಪಾರ ಹಾನಿ

Rashmi Kasaragodu
Updated On : 8 Sept 2013, 11:04 am

ಕ,ಪ್ರ,ವಾರ್ತೆ   ಮಧುಗಿರಿ   ಸೆ.8
ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಪ್ಪೂರು ಕೃಷ್ಣಮೂರ್ತಿ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ವಿಷಾದಿಸಿದರು.
ಮಧುಗಿರಿ ತಾಲೂಕು ಕಸಾಪ ರಂಗಕರ್ಮಿ ಕುಪ್ಪೂರು ಕೃಷ್ಣಮೂರ್ತಿ ಅವರ ನಿಧನಕ್ಕೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ವೈವಿಧ್ಯಮಯ ಸೇವೆ ಸಲ್ಲಿಸಿದ ಕುಪ್ಪೂರು ನಿರ್ದೇಶಕರಾಗಿ, ನಟರಾಗಿ ಕಲಾ ಪೋಷಕರಾಗಿ ಅಪೂರ್ವ ಸೇವೆ ಸಲ್ಲಿಸಿದರು ಎಂಗು ಗುಣಗಾನ ಮಾಡಿದರು. ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ನೋವುಂಡು ಜನತೆಗೆ ನಲಿವು ನೀಡುವುದೇ ರಂಗಭೂಮಿ, ರಂಗಕರ್ಮಿಗಳ ಕೆಲಸ. ಅದೇ ರೀತಿ ರಂಗಕರ್ಮಿ ಕುಪ್ಪೂರು   ರಂಗ ಕಲೆಯ ಹೂವನ್ನು ಅರಳಿಸುವ ಕಾಯಕ ಮಾಡಿ ಅಮರರಾಗಿದ್ದಾರೆ ಎಂದರು.
ಕಲಾರಂಗದ ಕಾರ್ಯಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ಸಿ.ಕೃಷ್ಣಪ್ಪ, ಎ.ಎನ್.ನರಸಿಂಹಮೂರ್ತಿ,ನೌಕರರ ಸಂಘದ  ಅಧ್ಯಕ್ಷ ಎನ್. ಮಹಾಲಿಂಗೇಶ್, ಅಮರಾವತಿ ದ್ರೇಹಚಾರಿ, ತಬಲ ರಾಮಕೃಷ್ಣ, ನಿದೇಶಕ ರಂಗನಾಥಪ್ಪ, ಮಂಡಿ ಬಸವರಾಜು ಮಾತನಾಡಿದರು. ಮಹಿಳಾ ಪ್ರತಿನಿಧಿಗಳಾದ ಸಹನಾ ನಾಗೇಶ್, ಗಾಯಿತ್ರಿ ನಾರಾಯಣ್, ಸುರೇಶ್ ಮೊದಲಾದವರು ಉಪಸ್ಥಿತರಿದ್ದು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement