ಗೀತೋಪದೇಶ ಸಮಾಜಕ್ಕೆ ಅನಿವಾರ್ಯ'
ಚಿಕ್ಕನಾಯಕನಹಳ್ಳಿ: ಶ್ರೀಕೃಷ್ಣ ಭೇದಿಸಿದ ಗೀತೋಪದೇಶವು ಸಮಾಜದಲ್ಲಿ ಉತ್ತಮ ಬದುಕಿನ ದಾರಿಯನ್ನು ರೂಪಿಸುವ ಜ್ಞಾನವಂತಿಕೆ ಹಾಗೂ ರಾಜತಾಂತ್ರಿಕ ತಿರುಳಿನ ಧರ್ಮ ದರ್ಶನವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದರು.
ಅವರು ಇಲ್ಲಿನ ರೋಟರಿ ಬಾಲಭವನದಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಶ್ರೀಕೃಷ್ಣವೇಷ-ಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಶ್ರೀಕೃಷ್ಣ ತನ್ನ ಬದುಕಿನಲ್ಲಿ ಜನಸಾಮಾನ್ಯರ ಒಡನಾಡಿಯಾಗಿದ್ದು ತನ್ನ ತುಂಟಾಗಳಿಂದ ಅವರ ಮನಸೆಳೆದ ಚಾಣಾಕ್ಷ.ಈ ಮೂಲಕ ಜನರ ಕಷ್ಟಕೋಟಲೆಗಳನ್ನು ಅರಿತ,ಅವುಗಳಿಗೆ ತನ್ನ ಬಾಲ್ಯದಲ್ಲಿಯೇ ಪರಿಹಾರವನ್ನು ಸಹ ಕೊಟ್ಟ ನಿಪುಣ. ಇಂದು ಜಾತಿ, ಧರ್ಮ ಮೀರಿ ನಿಂತು ಅನ್ಯಧರ್ಮೀಯರು ಆತನ ವೇಷಭೂಷಣವ್ನನು ತೊಟ್ಟಿರುವುದು ಆತನ ಹಿರಿಮೆಯನ್ನು ತೋರಿಸುತ್ತದೆ. ಈ ಮೂಲಕ ಆತ ಸವಾಂರ್ತರಯಾಮಿಯಾಗಿದ್ದಾನೆ ಎಂದರು. ಮಕ್ಕಳ ಸಾಹಿತ್ಯಕ್ಕಾಗಿ ಶಿವರಾಮ ಕಾರಂತ ಪ್ರಶಸ್ತಿ ಪುರಸ್ಕೃತರಾದ ಎಂ.ವಿ. ನಾಗರಾಜರಾವ್ ಅವರನ್ನು ಸನ್ಮಾನಿಸಲಾಯಿತು.