ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ
ಮಧುಗಿರಿ: ಮಧುಗಿರಿ ತಾಲೂಕು ವೀರಶೈವ ಸಮಾಜ ಇವರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ವೀರಶೈವ ಸಮಾಜದ ವಿದ್ಯಾರ್ಥಿಗಳು 2012-13ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಿಂದ ಹಿಡಿದು ಐಪಿಎಸ್ವರೆಗೆ ಶೇ.70.ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಧುಗಿರಿ ತಾಲೂಕು ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿರುತ್ತದೆ. ಹಾಗಾಗಿ ಪ್ರತಿಭಾವಂತ ವೀರಶೈವ ಲಿಂಗಾಯಿತ ವಿದ್ಯಾರ್ಥಿಗಳು ತಮ್ಮ ಜೆರಾಕ್ಸ್ ಅಂಕಪಟ್ಟಿಯೊಂದಿಗೆ ತಮ್ಮ ಪೂರ್ವ ವಿಳಾಸವನ್ನು ಹಾಗೂ 12-13ನೇ ಸಾಲಿನಲ್ಲಿ ನಿವೃತ್ತರಾದ ವೀರಶೈವ ಲಿಂಗಾಯಿತ ನೌಕರರು ತಮ್ಮ ವಿಳಾಸದೊಂದಿಗೆ ಸೆ.12ರ ಒಳಗಾಗಿ ತಮ್ಮ ಮಾಹಿತಿಯನ್ನು ಸಿದ್ಧಗಂಗಯ್ಯ, 9449948234, ಬಿ.ಎಚ್.ಪಂಚಾಕ್ಷರಯ್ಯ ವಕೀಲರು 9448603511 ಇವರಿಗೆ ಸಲ್ಲಿಸಲು ಕೋರಿದೆ.