ಕೊಳೆಗೇರಿಗಳಲ್ಲಿ ನೈಜ ಸೌಹಾರ್ದ ವಾತಾವರಣ
ತುಮಕೂರು: ಸಮಾಜದಲ್ಲಿ ಕೋಮಸೌಹಾರ್ದತೆ ಕದಡುವ ಕೋಮವಾದಿ ಶಕ್ತಿಗಳ ಬಗ್ಗೆ ಎಚ್ಚರಯಿರಬೇಕೆಂದು ಎಂದು ಬಾ.ಹ. ರಮಾಕುಮಾರಿ ಅಭಿಪ್ರಾಯಪಟ್ಟರು.
ಸ್ನೇಹ ಬಳಗ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಲೇಬರ್ ಕಾಲೋನಿಯಲ್ಲಿ ಮಕ್ಕಳೊಂದಿಗೆ ಸೌಹಾರ್ದ ಯುಗಾದಿ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯುಗಾದಿ ಹಬ್ಬದ ಹಿನ್ನೆಲೆಯನ್ನು ತಿಳಿಸಿ, ಜೀವನದಲ್ಲಿ ಕಷ್ಟ-ಸುಖಗಳ ಸಮ್ಮಿಲನದಂತೆ ಈ ಹಬ್ಬದಲ್ಲಿ ಬೇವು-ಬೆಲ್ಲವನ್ನು ಮಿಶ್ರಣಮಾಡಿ ಹಂಚಲಾಗುತ್ತದೆ ಎಂದರು.
ಅನ್ನಪೂರ್ಣ ವೆಂಕಟನಂಜಪ್ಪ ಅವರು ಹಿಂದೂಗಳಿಗೆ ಯುಗಾದಿ ಹೊಸವರ್ಷದ ಪ್ರಾರಂಭವಾಗಿದೆ. ವಸಂತ ಕಾಲವು ಪ್ರಾರಂಭವಾಗಿದ್ದು ಪ್ರಕೃತಿಯ ನವಚೈತನ್ಯದಿಂದ ಹೊಸತನ ಪ್ರಾರಂಭವಾಗುತ್ತದೆ ಎಂದರು.
ನಂತರ ಮಾತನಾಡಿದ ಕಮಲ ಅವರು ಮಕ್ಕಳಿಗೆ ಕಥೆಯ ಮೂಲಕ ಶಿಸ್ತು ಹಾಗೂ ಶಿಕ್ಷಕರ ಜವಾಬ್ದಾರಿಯನ್ನು ತಿಳಿಸಿದರು. ಸ್ಲಂ ಜನಾಂದೋಲನಾ-ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ಕೊಳಗೇರಿಗಳಲ್ಲಿ ಎಲ್ಲಾ ಧರ್ಮ, ಜಾತಿಯವರು ನೆಲೆಸಿದ್ದು ಯಾವುದೇ ರೀತಿಯ ಮತಿಯ ಗಲಭೆಗಳು ಆಗದೆ ಸೌಹಾರ್ದಯುತ ಜೀವನ ನಡೆಸುತ್ತಿದ್ದು, ಒಂದು ಮಿನಿ ಇಂಡಿಯಾವಿದ್ದಂತೆ ಎಂದು ಕೊಳಗೇರಿಗಳಲ್ಲಿ ಜಾತಿ, ಧರ್ಮ ಎಲ್ಲೆ ಮೀರಿ ಮಾನಮೀಯತೆಯ ಸಹಬಾಳ್ವೆಯ ಜೀವನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸಿಐಟಿಯುನ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಭಾರತ ಗೆಲ್ಲಿಸಿ ನರೇಂದ್ರ ಮೋದಿ ಪ್ರಧಾನಿ ಮಾಡಿ ಎಂಬ ಘೋಷಣೆಯ ವ್ಯಾಖ್ಯಾನ ಸೌಹರ್ದತೆಯನ್ನು ನಾಶ ಮಾಡುವ ಹುನ್ನಾರ ಎಂದರು. ಮಕ್ಕಳ ದೇಶ ಬದಲಾಯಿಸುವ ಸಂಕಲ್ಪ ತೊಡಬೇಕೆಂದರು. ಈ ಕಾರ್ಯಕ್ರಮದಲ್ಲಿ ಕೊಳಗೇರಿ ಸಮಿತಿ ಸೈಯದ್ ಅಲ್ತಾಪ್, ಶೆಟ್ಟಾಳಯ್ಯ, ಕೋಮಲ, ಗಾಯಿತ್ರಿ, ಅರುಣ್ ಹಾಗೂ 100 ಮಕ್ಕಳು, ಯುವಜನರು ಮತ್ತು ಪೋಷಕರು ಭಾಗವಹಿಸಿದರು.