ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್‌ವೈ ಪ್ರಚಾರ ನಾಡಿದ್ದು

Rashmi Kasaragodu
Updated On : 2 Apr 2014, 2:42 am

ತುಮಕೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಏ. 4 ರಂದು ತುಮಕೂರು ಲೋಕಸಭಾ ಕ್ಷೇತ್ರದ 4 ತಾಲೂಕುಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಮತ್ತು ಅಭ್ಯರ್ಥಿ ಜಿ.ಎಸ್. ಬಸವರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 4 ರಂದು ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ತುಮಕೂರು ಗ್ರಾಮಾಂತರದ ಹೆಬ್ಬೂರು ಹೋಬಳಿಗೆ ಆಗಮಿಸುವ ಯಡಿಯೂರಪ್ಪ ಮೊದಲಿಗೆ ಹೆಬ್ಬೂರು ನಂತರ, ಮಧ್ಯಾಹ್ನ 3-15 ಕ್ಕೆ ತುರುವೇಕೆರೆಯಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಕೆ.ಬಿ.ಕ್ರಾಸ್, ಸಂಜೆ 5 ಗಂಟೆಗೆ ನಿಟ್ಟೂರು, ಸಂಜೆ 6 ಗಂಟೆಗೆ ಗುಬ್ಬಿ ಮತ್ತು ರಾತ್ರಿ 7 ಗಂಟೆಗೆ ತುಮಕೂರಿನ ಚಿಕ್ಕಪೇಟೆ, ಎಂ.ಜಿ.ರಸ್ತೆ ಮತ್ತು ಸೋಮೇಶ್ವರ ಬಡಾವಣೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಮೋದಿ ಭೇಟಿ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏಪ್ರಿಲ್ 10 ರೊಳಗಾಗಿ ಚಿಕ್ಕಬಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರಲಿದ್ದು, ಅಂದು ತುಮಕೂರು ಜಿಲ್ಲೆಗೂ ಆಗಮಿಸುವ ಕಾರ್ಯಕ್ರಮವಿದೆ.
ಸೊಗಡು ಪಕ್ಷ ವಿರೋಧಿ ಕೆಲಸ ಮಾಡಲ್ಲ: ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷ ವಿರೋಧಿ ಕೆಲಸ ಮಾಡುವುದಿಲ್ಲ. ಅವರು ಸದ್ಯ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ ಹೊರಗಡೆ ಬರುತ್ತಿಲ್ಲ. ಆದರೆ ಅವರು ಮನೆಯಲ್ಲಿಯೇ ಕುಳಿತು ಮಾಡಬೇಕಾದ ಪ್ರಚಾರವನ್ನು ಮಾಡುತ್ತಿದ್ದಾರೆ ಎಂದರು. ಅವರ ಮೈಯಲ್ಲಿ ಹರಿಯುತ್ತಿರುವ ಪ್ರತಿ ರಕ್ತದ ಹನಿ ಆರ್‌ಎಸ್‌ಎಸ್ ನದ್ದು. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವರು. ಪಕ್ಷದ ಅತ್ಯಂತ ನಿಷ್ಠಾವಂತಕಾರ್ಯಕರ್ತ. ಬೇರೇ ಪಕ್ಷದ  ಯಾವುದೋ ನಾಯಕರು, ಅನಿರೀಕ್ಷಿತವಾಗಿ ಭೇಟಿ ಮಾಡಿದ್ದರು ಎಂದಾಕ್ಷಣ ಅವರು ಅವರ ಪಕ್ಷ ತೊರೆಯುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆ ಎಂದು ಹೇಳುವುದು ತಪ್ಪು. ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.
3 ನೇ ಸ್ಥಾನಕ್ಕೆ ಜೆಡಿಎಸ್: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭವಿಷ್ಯವೇ ಇಲ್ಲ. ಕ್ಷೇತ್ರದಲ್ಲಿ ಆ ಪಕ್ಷಕ್ಕೆ ಮೂರನೇ ಸ್ಥಾನವೇ ಗತಿ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೌರಿಶಂಕರ್ ಅವರ ಬಲ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಜಾಪ್ರಭುತ್ವವನ್ನು ಮಾರಾಟ ಮಾಡಿದ ವ್ಯಕ್ತಿ. ಸ್ವಯಂ ತಮ್ಮನ್ನೇ ತಾವು ಮಾರಾಟ ಮಾಡಿಕೊಂಡ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಜನರು ನಂಬುವುದಿಲ್ಲ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ವಿಪಕ್ಷಗಳ ಅಭ್ಯರ್ಥಿಗಳ ಬಂಡವಾಳ  ಬಯಲಾಗಿದೆ ಎಂದು ಸುರೇಶ್‌ಗೌಡ ಲೇವಡಿ ಮಾಡಿದರು. ಕ್ಷೇತ್ರದಲ್ಲಿ ಜಾತ್ಯಾತೀತ ಜನತಾ ದಳ ನಮಗೆ ಲೆಕ್ಕಕ್ಕಿಲ್ಲ. ನಮಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ನೇರ ಸ್ಪರ್ಧಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement