ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಶತಾಯುಷಿ ಸಿದ್ಧಗಂಗಾ ಶ್ರೀಗಳ ಉತ್ಸಾಹ ಅನನ್ಯ'

Rashmi Kasaragodu
Updated On : 2 Apr 2014, 2:42 am

ತುಮಕೂರು: ಶತಾಯುಷಿ, ಸಿದ್ಧಗಂಗೆಯ ಡಾ.ಶಿವಕುಮಾರಸ್ವಾಮಿಗಳ ಉತ್ಸಾಹ, ಕಾರ್ಯತತ್ಪರತೆ ಅನನ್ಯ ಎಂದು
ಮಹಾತ್ಮಗಾಂಧಿಯವರ ಮೊಮ್ಮಗಳಾದ ಸುಮಿತ್ರಾಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ಸಿದ್ಧಗಂಗಾ ಶ್ರೀಗಳ 107 ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾವು ಬೆಂಗಳೂರಿಗೆ ಬಂದಿದ್ದು, ಸ್ನೇಹಿತರ ಸಲಹೆ ಮೇರೆಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದಾಗಿ ತಿಳಿಸಿದರು. ಸಿದ್ಧಗಂಗೆಗೆ ಬಂದಿದ್ದು ಇದೇ ಮೊದಲು. ಅದೂ ಶ್ರೀಗಳ ಹುಟ್ಟುಹಬ್ಬದಂದೇ ಅವರನ್ನು ಭೇಟಿಯಾಗಿದ್ದು, ಅವಿಸ್ಮರಣೀಯ ಕ್ಷಣ. ಸಿದ್ಧಗಂಗಾ ಶ್ರೀಗಳ ಜೀವನೋತ್ಸಾಹಕ್ಕೆ ಎಣೆಯಿಲ್ಲ, ಸಿದ್ಧಗಂಗಾ ಶ್ರೀಗಳ ಸಾಧನೆ, ಕಾಯಕತತ್ವ, ವ್ಯಕ್ತಿತ್ವ ನನಗೆ ಪ್ರೇರಣೆಯೆನಿಸಿದೆ. ಸಿದ್ಧಗಂಗಾ ಶ್ರೀಗಳನ್ನು ಭೇಟಿಯಾಗಿದ್ದು ಬಹಳ ಸಂತೋಷದ ವಿಷಯ ಎಂದು ಸುಮಿತ್ರಾಗಾಂಧಿ ಕುಲಕರ್ಣಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement