ಕಲಾವಿದರ ಬಗ್ಗೆ ಅನಾದಾರ ಬೇಡ
ತುಮಕೂರು: ಕವಿಗಳು, ಕಲಾವಿದರು ನಾಡಿನ ಆಸ್ತಿ. ಅಂತಹವರ ಬಗ್ಗೆ ಸರ್ಕಾರ ಅನಾದಾರ ತೋರಬಾರದು ಎಂದು ರಾಜರಾಜೇಶ್ವರಿ ನೃತ್ಯ ಕಲಾಮಂದಿರದ ಆಚಾರ್ಯರೂ ಆದ ಕೆ.ಎಂ. ರಾಮನ್ ಅಭಿಪ್ರಾಯಪಟ್ಟರು. ಅವರು ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯ ಕೂಟದ ವತಿಯಿಂದ ಜರುಗಿದ ಅಮೆರಿಕಾದ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಕವಿತಾಕೃಷ್ಣ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿ ಅಳಿದರೆ ಅವನಿಗಿಂತ ಉತ್ತಮ ರಾಜಕಾರಣಿ ಹುಟ್ಟಲು ಸಾಧ್ಯ. ಕವಿಯೋರ್ವ ಅಳಿದರೆ ಅಂತಹ ಕವಿ ಹುಟ್ಟಲಾರ. ಕವಿತಾಕೃಷ್ಣ ಅವರು ಈ ನಾಡಿನ ಒಂದು ದೊಡ್ಡ ವಟವೃಕ್ಷ. ತಾವು ಬೆಳೆದು ಅನ್ಯರನ್ನು ಜಾತಿ, ಕುಲ, ಗೋತ್ರ, ಲಿಂಗಭೇದವಿಲ್ಲದೆ ಬೆಳೆಸುವ ಮಾನವತಾವಾದಿ ಎಂದರು.