ಜಿಲ್ಲೆಗೆ ಬಸವರಾಜು ಸಾಧನೆ ಏನು?
ತುರುವೇಕೆರೆ: ಬಿಜೆಪಿಯಿಂದ ಸಂಸದರಾಗಲು ಮುಂದಾಗಿರುವ ಜಿ.ಎಸ್. ಬಸವರಾಜು ರವರೇ ಜಿಲ್ಲೆಗೆ ನೀವು ನೀಡಿರುವ ಕೊಡುಗೆಯಾದರೂ ಏನು. ನಾಲ್ಕು ಬಾರಿ ಸಂಸದರಾಗಿದ್ದೀರಿ, ಕಳೆದ ಬಾರಿ ಸಂಸದರಾಗಿದ್ದ ತಾವು ಜಿಲ್ಲೆಗೆ ಯಾವ ಯಾವ ಅಭಿವೃಧ್ಧಿ ಕಾಮಗಾರಿಯನ್ನು ತಂದಿದ್ದೀರಿ. ಜಿಲ್ಲೆಯ ಅಭಿವೃಧ್ಧಿ ಮಾಡಲು ಯಾವ ಯಾವ ಯೋಜನೆ ರೂಪಿಸಿದ್ದೀರಿ. ಹೋಗಲಿ ಎಷ್ಟು ಬಾರಿ ಲೋಕಸಭೆಗೆ ಹೋಗಿದ್ದೀರಿ, ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀರೀ...
ಹೀಗೆ ಹತ್ತಾರು ಪ್ರಶ್ನೆಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಹಾಲಿ ಸಂಸದ ಜಿ.ಎಸ್.ಬಸವರಾಜು ಕೇಳಿದರು.
ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಆಡಳಿತವನ್ನು ನೀಡಿದೆ. ಭ್ರಷ್ಟಾಚಾರ ನಿಗ್ರಹ, ಲೋಕಪಾಲ್ ಮಸೂದೆ ಜಾರಿ ಎಂದು ಮುದ್ದಹನುಮೇಗೌಡ ಹೇಳಿದರು.
ಅಸಾಧ್ಯದ ಮಾತು: ಮೋದಿ ಪ್ರಧಾನಿ ಮಂತ್ರಿಯಾಗುವುದು ಅಸಾಧ್ಯದ ಮಾತು. ಮೋದಿಯ ಬಗ್ಗೆ ಜನಸಮಾನ್ಯರಲ್ಲಿ ಭಯದ ವಾತಾವರಣವಿದೆ. ಜಿಲ್ಲೆಯಿಂದ ಜೆಡಿಎಸ್ನಿಂದ ಸ್ಫರ್ಧಿಸಿರುವ ಎ.ಕೃಷ್ಣಪ್ಪನವರಿಗೆ ಕ್ಷೇತ್ರದ ಅರಿವೇ ಇಲ್ಲ. ಅವರು ಕ್ಷೇತ್ರದ ಹೊರಗಿನವರು. ತಮ್ಮ ಸ್ವಕ್ಷೇತ್ರದಲ್ಲಿ ಗೆಲ್ಲಲಾಗದವರು ಈ ಜಿಲ್ಲೆಯಲ್ಲಿ ಹೇಗೆ ತಾನೇ ಗೆದ್ದಾರು. ಅದು ಅಸಾಧ್ಯದ ಮಾತು ಎಂದು ಮುದ್ದಹನುಮೇಗೌಡ ಹೇಳಿದರು.
ಅಭಿವೃದ್ಧಿ ಕರ್ತವ್ಯ: ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷೀನಾರಾಯಣ್ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಮಾಡುವುದು ತಮ್ಮ ಮೊದಲ ಕರ್ತವ್ಯವಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಚೌದ್ರಿ ರಂಗಪ್ಪ, ಎಂ.ವಿಶ್ವೇಶ್ವರಯ್ಯ, ಮಸಾಲಾ ಜಯರಾಂ, ಕೆಪಿಸಿಸಿ ಸದಸ್ಯೆ ಗೀತಾ ರಾಜಣ್ಣ, ಟಿ.ಎಸ್. ದಾನಿಗೌಡ, ಎಂ.ಡಿ.ಮೂರ್ತಿ, ಸಿ ಎಸ್ ಪುರದ ಟಿ.ಎಂ.ಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಸ್.ವಸಂತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್. ಜಯರಾಂ, ಕೆ.ಬಿ. ಹನುಮಂತಯ್ಯ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಾ ಸ್ವರ್ಣಕುಮಾರ್, ಸಿ ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಟ್ಟಸ್ವಾಮಿಗೌಡ, ಗೋವಿಂದರಾಜು ಗೌಡ, ಮಾಚೇನಹಳ್ಳಿ ರಾಮಣ್ಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮೂಡಲಗಿರಿಗೌಡ, ನಿರ್ದೇಶಕರಾದ ಉಗ್ರೇಗೌಡ ಮೊದಲಾದವರು ಭಾಗವಹಿಸಿದ್ದರು.
ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಂಜುಂಡಯ್ಯ ಕಾರ್ಯಕ್ರಮ ನಿರೂಪಿಸಿದರು