ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಶದ ಭದ್ರತೆಗೆ ಮೋದಿ ಬೆಂಬಲಿಸಿ

Rashmi Kasaragodu
Updated On : 3 Apr 2014, 12:59 pm

ಪಾವಗಡ: ಭದ್ರತೆ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನರೇಂದ್ರಮೋದಿ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ಮತ ನೀಡಿ ಎಂದು ತಾ.ಬಿಜೆಪಿ ಮುಖಂಡ ಓಬಳಾಪುರ ಈಶ್ವರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಇಂದು ದೇಶದ ಭದ್ರತೆ, ಅಭಿವೃದ್ಧಿಗಾಗಿ ನರೇಂದ್ರಮೋದಿ ಅವರಂತಹ ನಾಯಕರ ಅವಶ್ಯಕತೆ ಇದೆ. ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ಮತ ನೀಡಿ. ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಗುಜರಾತ್‌ನಲ್ಲಿ ಕೈಗೊಂಡ ಅಭಿವೃದ್ಧಿ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ ಎಂದರು. ರಾಜ್ಯ ರೈತ ಮೋರ್ಚ ಅಧ್ಯಕ್ಷ ಶಿವಪ್ರಸಾದ್ ಮತ್ತು ತಾ.ಅಧ್ಯಕ್ಷ ವಕೀಲ ಮುರಳೀಧರ್ ಅವರು ಮಾತನಾಡಿದರು. ಲಿಂಗದಹಳ್ಳಿ, ವದನಕಲ್ಲು, ರಂಗಸಮುದ್ರ, ಓಬಳಾಪುರ, ಮರಿದಾಸನಹಳ್ಳಿ ತಾಲೂಕಿನ ಇತರೆ ಕಡೆ ಬಿಜೆಪಿ ಪರ ಪ್ರಚಾರ ನಡೆಯಿತು.


ಸಿಪಿಐ ಪ್ರಚಾರ ಇಂದು
ತುಮಕೂರು: ಏ. 3 ರಿಂದ 14 ರವರೆಗೆ ಸಿಪಿಐ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ವೇಳಾಪಟ್ಟಿ ಇಂತಿದೆ. ಏ. 3 ರಂದು ಗುಬ್ಬಿ ತಾಲೂಕಿನಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಬೆಳಗ್ಗೆ 9 ಗಂಟೆಗೆ ಸುದ್ದಿಗೋಷ್ಠಿ, 10-30 ಕ್ಕೆ ನಿಟ್ಟೂರು, 11 ಗಂಟೆಗೆ ಕಡಬಾ, 12 ಕ್ಕೆ ಮಾಯಸಂದ್ರ. ಮಧ್ಯಾಹ್ನ 1 ಗಂಟೆಗೆ ತುರುವೇಕೆರೆಗೆ ಪ್ರಯಾಣ. 1-30 ಕ್ಕೆ ನೊಣವಿನಕೆರೆ, 4 ಗಂಟೆಗೆ ತಿಪಟೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement