'ಯುಪಿಎ ತಪ್ಪು ನಿರ್ಧಾರ ದೇಶದ ಸ್ಥಿತಿ ಗಂಭೀರ'
ಕುಣಿಗಲ್: ದೇಶದ ರಕ್ಷಣಾ ವಿಷಯದಲ್ಲೂ ನಿರ್ಲಕ್ಷ್ಯವಹಿಸಿ, ಕಳೆದೆರಡು ತಿಂಗಳಿನಿಂದಲೂ ವಾಯುಸೇನೆಗೆ ಮುಖ್ಯಸ್ಥರನ್ನು ನೇಮಿಸಲು ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಸಂಘಟನಾ ಕಾರ್ಯದರ್ಶಿ ಸಂತೋಷ್ ತಿಳಿಸಿದರು.
ಬುಧವಾರ, ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಾಲಯ ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ನ ಹಲವು ತಪ್ಪು ನಿರ್ಧಾರಗಳಿಂದ ದೇಶದ ಜನತೆ ಪರದಾಡುವಂತಾಗಿದೆ. ಲೋಕಸಭೆ ಚುನಾವಣೆಗಳಲ್ಲಿ ನಮೋ ವರ್ಚಸ್ಸು ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಕಂಡು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕಂಗಾಲಾಗಿವೆ, ಕಾರ್ಯಕರ್ತರು ಸಂಘಟಿತರಾಗಿ ಹೋರಾಡಿ, ದೇಶದ ಸಮಗ್ರ ಭದ್ರತೆ ನಿಟ್ಟಿನಲ್ಲಿ ನಮೋ ಅವರನ್ನು ಪ್ರಧಾನಿಯನ್ನಾಗಿಸಲು ಪಣ ತೊಡಬೇಕೆಂದರು. ನಟಿ ಮಾಳವಿಕ, ಕಾಂಗ್ರೆಸ್ ನೇತೃತ್ವದ ಕೇಂದ್ರಸರ್ಕಾರ ತನ್ನ ಆಡಳಿತಾವಧಿಯಲ್ಲಿ ಜೈಜವಾನ್ ಮತ್ತು ಜೈ ಕಿಸಾನ್ ಎರಡನ್ನು ಮರೆತು ಇಬ್ಬರ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಷ್ಟ್ರದ ಸೈನಿಕರಿಗೆ ಭದ್ರತೆ ಇಲ್ಲದ ಮೇಲೆ ಜನತೆಯ ಪಾಡೇನು ಎಂಬಂತಾಗಿದೆ. ರೈತರ, ಸೈನಿಕರ ಸುಭದ್ರತೆಗಾಗಿ ಈಬಾರಿ ಬಿಜೆಪಿಗೆ ಮತನೀಡುವಂತೆ ಮನವಿ ಮಾಡಿದರು.