ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಹಣದ ಆಮಿಷಕ್ಕೆ ಬಲಿಯಾಗದಿರಿ'

Rashmi Kasaragodu
Updated On : 3 Apr 2014, 12:58 pm

ತಿಪಟೂರು: ಮತದಾರರು ಭ್ರಷ್ಟರಾಗದೆ ಮತದಾನ ಮಾಡಿದ್ದೇ ಆದಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಆಯ್ಕೆಯಾಗುವ ಮೂಲಕ ದೇಶದ ಮತ್ತು ಸಾರ್ವಜನಿಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಾಣಲಿವೆ. ಸೀರೆ, ಹಣ ಮತ್ತಿತರೆ ಆಮಿಷಗಳಿಗೆ ಬಲಿಯಾಗದೆ ಜವಾಬ್ದಾರಿಯುತವಾಗಿ ಮತದಾನ ಮಾಡಬೇಕೆಂದು ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ತಿಳಿಸಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರಿಗೆ ಕೃಷಿ ಸಾಲ, ಹಾಲು ಉತ್ಪಾದಕರಿಗೆ ಮೊದಲ ಬಾರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಬಿಜೆಪಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಭಾಗ್ಯಲಕ್ಷ್ಮಿ, ಶಿಕ್ಷಣ, ಸಾಮಾಜಿಕ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೀಡುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಿದೆ. ಕಾಂಗ್ರೆಸ್ ಮಧ್ಯರಾತ್ರಿವರೆಗೆ ಬಾರ್ ತೆಗೆಯುವಂತೆ ಮಾಡಿದ್ದು, ಇದು ಮಹಿಳೆಯರ ಮಾನ ಕಾಯುವಂತ ಕೆಲಸವಲ್ಲ. ದೇಶದ ಭವಿಷ್ಯ ಕಾಯುವ ಕೆಲಸ ಮಹಿಳೆಯರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಮಹಿಳೆಯರು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಇಂದಿರಾಗಾಂಧಿ ಕಾಲವೇ ಬೇರೆ, ಸೋನಿಯಾ ಗಾಂಧಿ ಕಾಲವೇ ಬೇರೆ. ದೇಶದಲ್ಲಿ ಏನಾದರೂ ಬದಲಾವಣೆ ತರುತ್ತಾರೆಂಬ ಮಹಿಳೆಯರಲ್ಲಿ ನಂಬಿಕೆ ಇತ್ತು. ಆ ನಂಬಿಕೆ ಸುಳ್ಳಾಗಿದೆ. ಕಾಂಗ್ರೆಸ್ ಸರ್ಕಾರ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಅದರಲ್ಲೂ ತಾರತಮ್ಯ ಮಾಡಿದ್ದು ಉದಾಹರಣೆಯಾಗಿದೆ. ಹೆಣ್ಣು ಮಕ್ಕಳ ಶಾಪ ಕಾಂಗ್ರೆಸ್ ಪಕ್ಷಕ್ಕೆ ತಟ್ಟುವುದೇ ಬಿಡುವುದಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರನ್ನು ಗೆಲ್ಲಿಸುವ ಮೂಲಕ ಮೋದಿ ಪ್ರಧಾನಿಯಾಗಲು ಸಹಕರಿಸಬೇಕೆಂದು ಶ್ರುತಿ ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಭ್ರಷ್ಟ ಸರ್ಕಾರ ಬೇಡ: ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಸುಲೋಚನಾ ಮಾತನಾಡಿ ಮಹಿಳೆಯರಿಗೆ ಕಾಂಗ್ರೆಸ್‌ನಂತಹ ಭ್ರಷ್ಟ ಸರ್ಕಾರ ಬೇಡ ಎಂದರು.
ಜಿಲ್ಲಾ ಮಹಿಳಾ ಅಧ್ಯಕ್ಷೆ ಪ್ರೇಮ ಹೆಗಡೆ ಮಾತನಾಡಿ ಅತ್ಯಾಚಾರದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,  ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಸರ್ಕಾರ ನಮಗೆ ಬೇಡ. ಕಾಂಗ್ರೆಸ್ ಸರ್ಕಾರ ನಿರ್ಮೂಲನೆ ನಮ್ಮ ಗುರಿ ಎಂದರು.
ಸಮಾವೇಶದಲ್ಲಿ ಬಿಜೆಪಿ ಮುಖಂಡರಾದ ಲೋಕೇಶ್ವರ, ಬಿ.ಸಿ.ನಾಗೇಶ್, ತಾ. ಬಿಜೆಪಿ ಅಧ್ಯಕ್ಷೆ ಪಾರ್ವತಮ್ಮ, ತಾ.ಪಂ. ಅಧ್ಯಕ್ಷೆ ಶಿವಗಂಗಮ್ಮ, ನಗರಸಭೆ ಅಧ್ಯಕ್ಷೆ ಗೀತಾ ದಿಲೀಪ್, ಜಿ.ಪಂ. ಸದಸ್ಯೆ ಯಶೋಧ, ಮುಖಂಡರಾದ ಶೋಭಾಜಯದೇವ್, ಪುಷ್ಪಶಂಕರಲಿಂಗಪ್ಪ, ರಾಜ್ಯ ಯುವ ಮೋರ್ಚಾ ಮಾಜಿ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement