ಅಭ್ಯರ್ಥಿಗಳ ಬ್ಯಾಂಕ್ ಪಾಸ್ ಪರಿಶೀಲನೆಗೆ ನೀಡಿ
ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 2014ರ ಸಂಬಂಧ 20-ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗ ನಿಗಧಿಪಡಿಸಿರುವ ಭಾಗ-ಎ (ದೈನಂದಿನ ಲೆಕ್ಕದ ವಹಿ) ಭಾಗ-ಬಿ (ನಗದು ವಹಿ) ಮತ್ತು ಭಾಗ-ಸಿ (ಬ್ಯಾಂಕ್ ವಹಿ) ಗಳಲ್ಲಿ ದಾಖಲಿಸಿ ಹಣ ವಸೂಲಿ ರಶೀದಿ ಪ್ರತಿಗಳು ಹಾಗೂ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಪರಿಶೀಲನೆಗೆ ಸಲ್ಲಿಸಬೇಕಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರಗಳನ್ನು ನಿಗಧಿಪಡಿಸಿರುವ ದಿನಾಂಕಗಳಂದು ಎಲ್ಲಾ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ಚುನಾವಣಾ ವೆಚ್ಚಗಳ ವೀಕ್ಷಕರು ಅಥವಾ ಅವರಿಂದ ನಿಯೋಜಿತ ಅಧಿಕಾರಿಗಳಿಗೆ ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿನ ಚುನಾವಣಾ ವೆಚ್ಚಗಳ ಪರಿಶೀಲನಾ ತಂಡದ ಕಚೇರಿಯಲ್ಲಿ ಪರಿಶೀಲನೆಗೆ ಹಾಜರುಪಡಿಸಲು ಅವರು ತಿಳಿಸಿದ್ದಾರೆ.