ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಗೆ ಚಾಲನೆ

Rashmi Kasaragodu
Updated On : 4 Apr 2014, 2:13 am

ತುಮಕೂರು: ಗ್ರಾಮೀಣ ಬ್ಯಾಂಕುಗಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಜೆ.ಎಸ್. ವೀರಭದ್ರನ್ ಅಭಿಪ್ರಾಯಪಟ್ಟರು.
ತುಮಕೂರು ತಾಲೂಕು ಮಂಚಕಲ್ ಕುಪ್ಪೆ ಮತ್ತು ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮಗಳಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ನ ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಜನತೆಯ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದರ ಜತೆಯಲ್ಲಿ ನಬಾರ್ಡ್ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಗ್ರಾಮೀಣ ಬ್ಯಾಂಕುಗಳು ಶ್ರಮಿಸುತ್ತಿವೆ ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಜಯರಾಮಯ್ಯ ಮಾತನಾಡಿ, 'ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳ ಉತ್ತೇಜನಕ್ಕೆ ಅಗತ್ಯವಿರುವ ಸಾಲ ಸೌಲಭ್ಯಗಳ ವಿಸ್ತರಣೆಯೊಂದಿಗೆ ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯ ಆರ್ಥಿಕಾಭಿವೃದ್ಧಿಗೆ ಕಾವೇರಿ ಗ್ರಾಮೀಣ ಬ್ಯಾಂಕ್ ವಿಶೇಷ ಕೊಡುಗೆ ನೀಡಿದೆ' ಎಂದರು.
ಬ್ಯಾಂಕಿನ ತುಮಕೂರು ವಲಯದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ. ಮಂಜುನಾಥಯ್ಯ ಮಾತನಾಡಿ, 'ಸದ್ಯದಲ್ಲಿಯೇ ಕುಣಿಗಲ್ ತಾಲೂಕಿನ ಎಡೆಯೂರು ಮತ್ತು ತಿಪಟೂರು ತಾಲೂಕಿನ ಅರಳಗುಪ್ಪೆಯಲ್ಲಿ ನೂತನ ಶಾಖೆಗಳನ್ನು ತೆರೆಯಲಾಗುವುದು' ಎಂದರು. ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಕೆ. ರಾಘವೇಂದ್ರ, ಎಂ.ಎನ್. ಸುರೇಶಬಾಬು, ಸಿ.ಎಸ್. ವಿವೇಕಾನಂದ ಸ್ವಾಮಿ, ಬಿ.ಸಿ. ಶಿವಕುಮಾರ್, ಡಿ.ಆರ್. ಮೋಹನಕುಮಾರ್, ತುಂಬಾಡಿ ಶಾಖೆ ವ್ಯವಸ್ಥಾಪಕ ನರಸಿಂಹಮೂರ್ತಿ, ಮಂಚಕಲ್ ಕುಪ್ಪೆ ಶಾಖೆಯ ಗುರಲಿಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement