ಜೆಡಿಎಸ್ ಭೂಪಟದಲ್ಲೇ ಇಲ್ಲ: ಟಿಬಿಜೆ
ತುಮಕೂರು: ಕಾಂಗ್ರೆಸ್-ಬಿಜೆಪಿ ನಡುವೆ ದೇಶದಲ್ಲಿ ಹಣಾ-ಹಣಿ ನಡೆದಿದೆ. ಜೆಡಿಎಸ್ ಲೆಕ್ಕಕ್ಕಿಲ್ಲ. ಜೆಡಿಎಸ್ ಯಾವುದೇ ರೀತಿಯಲ್ಲೂ ರಾಜಕೀಯ ಪರಿಣಾಮ ಬೀರಲ್ಲ. ಇನ್ನು ಜೆಡಿಎಸ್ ಭೂಪಟದಲ್ಲೇ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.