ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿರಾ ತಾಲೂಕು ಜೆಡಿಎಸ್ ಅಧ್ಯಕ್ಷ ಉಗ್ರೇಶ್

Rashmi Kasaragodu
Updated On : 4 Apr 2014, 2:12 am

ಶಿರಾ: ಶಿರಾ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಆರ್. ಉಗ್ರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಸತ್ಯಾನಾರಾಯಣ ಘೋಷಿಸಿದರು. ಜೆ.ಡಿ.ಎಸ್. ವಕ್ತಾರ ಬಾಂಬೆ ರಾಜಣ್ಣ, ಜಿ.ಪಂ.ಮಾಜಿ ಉಪಾಧ್ಯಕ್ಷ ಮುದಿಮಡುರಂಗಸ್ವಾಮಯ್ಯ, ಬಂಡೆ ರಾಮಕೃಷ್ಣ, ಎಸ್.ಎಲ್. ಗೋವಿಂದರಾಜು, ಜಿ.ಪಂ.ಸದಸ್ಯ ವಿಶಾಲಾಕ್ಷಿ ಪ್ರಕಾಶಗೌಡ, ತಾ.ಪಂ ಸದಸ್ಯ ವಿನಯ್ ತ್ಯಾಗರಾಜು, ತಾ.ಪಂ.ಉಪಾಧ್ಯಕ್ಷ ಉದಯಶಂಕರ್, ಆರ್.ಪ್ರಕಾಶ್, ಸತ್ಯಪ್ರಕಾಶ್, ಅರೆಹಳ್ಳಿ ಬಾಬು ಸೇರಿದಂತೆ ಹಲವರು ಹಾಜರಿದ್ದರು.
ಪೂಜೆ ವಿಷಯ:  ಗ್ರಾಮಸ್ಥರಲ್ಲಿ ಬಡಿದಾಟ
ಕುಣಿಗಲ್: ತಾಲೂಕಿನ ಎಡೆಯೂರು ಹೋಬಳಿಯ ಹಾಲಪ್ಪನಗುಡ್ಡೆ ಗ್ರಾಮದಲ್ಲಿನ ಹಾಲಪ್ಪ ದೇವರ ಪೂಜೆ ವಿಷಯದಲ್ಲಿ 2 ಗ್ರಾಮದ ಗ್ರಾಮಸ್ಥರು ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ. ಹಳೇ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದುಕೊಂಡಿರುವ ಹಾಲಪ್ಪನಗುಡ್ಡೆ ಗ್ರಾಮದಲ್ಲಿರುವ ಹಾಲಪ್ಪ ದೇವರಿಗೆ, ನಡೇಮಾವಿನಪುರ ಮತ್ತು ಕನ್ನಗುಣಿ ಗ್ರಾಮದವರು, ಈ ಗ್ರಾಮಗಳ ಗೊಲ್ಲರಹಟ್ಟಿಯವರು ಪ್ರಮುಖವಾಗಿ ಪೂಜೆ ಸಲ್ಲಿಸಿಕೊಂಡು, ಜಾತ್ರೆ ಉತ್ಸವಾದಿ ನಡೆಸಿಕೊಂಡು ಬರುತ್ತಿದ್ದರು. ಕಳೆದ ಸೋಮವಾರದಂದು ಯುಗಾದಿ ಹಬ್ಬದ ದಿನ ಮತ್ತು ಮರುದಿನ ಜಾತ್ರಾ ಕಾರ್ಯಕ್ರಮವಿದ್ದು, ಜಾತ್ರೆಯಲ್ಲಿ ನಾಟಕ ನಡೆಸುವ ವಿಷಯವಾಗಿ, ಎರಡು ಗ್ರಾಮಗಳ ಜನತೆಯ ನಡುವೆ ಗೊಂದಲ ಏರ್ಪಟ್ಟು, ಈ ಮಧ್ಯೆ ರಾಜಕೀಯವೂ ಪ್ರವೇಶವಾದ ಕಾರಣ ಪರಿಸ್ಥಿತಿ ಹದಗೆಟ್ಟಿತು.  ತಾಲೂಕು ಆಡಳಿತ ನಡೆಸಿದ ಶಾಂತಿ ಸಭೆ ವಿಫಲವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಸಂಜೆಯಿಂದ ಬುಧವಾರ ಬೆಳಗ್ಗೆವರೆಗೂ ನಿಷೇಧಾಜ್ಞೆ ಹಾಕಲಾಗಿತ್ತು. ಬುಧವಾರ ನಿಷೇಧಾಜ್ಞೆ ತೆರವುಗೊಂಡ ನಂತರ, ಗುರುವಾರದಂದು ನಡೇಮಾವಿನಪುರ ಗ್ರಾಮದ ಗೊಲ್ಲರಹಟ್ಟಿಯವರು ಪೂಜೆ ಸಲ್ಲಿಸಲು ಹಾಲಪ್ಪದೇವಾಲಯಕ್ಕೆ ತೆರಳಿದಾಗ, ಕನ್ನಗುಣಿ ಗ್ರಾಮದ ಗೊಲ್ಲರ ಹಟ್ಟಿಯ ಗ್ರಾಮಸ್ಥರು ಆಕ್ಷೇಪಿಸಿದರಲ್ಲದೆ ಈ ಬಾರಿ ಜಾತ್ರೆ ನಡೆಯದಂತೆ ನಡೇಮಾವಿನಪುರದ ಕಡೆಯವರ ಕಾರಣ ಎಂದು ಆರೋಪಿಸಿ ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿ ಕೈ ಕೈ ಮಿಲಾಯಿಸಲು ಮುಂದಾಗಿ ಪರಿಸ್ಥಿತಿ ಗೊಂದಲಮಯವಾಯಿತು.  ವಿಷಯ ತಿಳಿದು ಸ್ಥಳಕ್ಕೆ ತೆರಳಿದೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಗ್ರಾಮಸ್ಥರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಎರಡೂ ಕಡೆಯ ಗ್ರಾಮಸ್ಥರು, ಕುಣಿಗಲ್ ಠಾಣೆಗೆ ಆಗಮಿಸಿ ಆರೋಪ, ಪ್ರತ್ಯಾರೋಪ ಮಾಡಿಕೊಂಡು ದೂರು ನೀಡಿದ್ದಾರೆ. ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ ಹಾಲಪ್ಪಗುಡ್ಡೆಯ ಹಾಲಪ್ಪ ದೇವಸ್ಥಾನ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಬೈಕ್ಗೆ ಟ್ಯಾಂಕರ್ ಡಿಕ್ಕಿ: ಸಾವು
ಮಧುಗಿರಿ: ಹಾಲಿನ ಟ್ಯಾಂಕರ್ ಹೀರೋ ಹೊಂಡಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅನಿತಾ (23) ಎಂಬಾಕೆ ಮೃತಪಟ್ಟು, ನರೇಂದ್ರ ಗಾಯಗೊಂಡಿರುವ ಘಟನೆ ಮಧುಗಿರಿಯ ಸಿದ್ದಾಪುರ ಗೇಟ್ನಲ್ಲಿ ಗುರುವಾರ ಸಂಜೆ ನಡೆದಿದೆ. ಇವರಿಬ್ಬರು ಮಧುಗಿರಿ ತಾಲೂಕು ನೇರಳಕೆರೆ ಗ್ರಾಪಂನ ಕಾಟಗೊಂಡನಹಳ್ಳಿಯವರು. ಅಕ್ಕ-ಪಕ್ಕದ ಮನೆಯವರು ಎನ್ನಲಾಗಿದೆ. ಗಾಯಗೊಂಡಿರುವ ನರೇಂದ್ರ ಅವರನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸ್ಥಳದಲ್ಲಿ ಹೆದ್ದಾರಿ ದುರಸ್ಥಿ ನಡೆದಿದ್ದು, ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಪದೇ-ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ನಾಗರಿಕರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement