ಗೌಡರು ಗೆಲ್ಲಲು ಸಾಧ್ಯವಿಲ್ಲ: ಜಯಚಂದ್ರ ಭವಿಷ್ಯ
ಪಾವಗಡ: ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಹಾಸನದಿಂದ ದೇವೇಗೌಡರು ಗೆಲ್ಲಲು ಸಾಧ್ಯವಿಲ್ಲವೆಂದು ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ.ಜಯಚಂದ್ರ ಹೇಳಿದರು.
ಶುಕ್ರವಾರ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಬೆಂಬಲದಿಂದ ಎಚ್.ಡಿ.ದೇವೇಗೌಡ ಪ್ರಧಾನಿಯಾದ ಸಂದರ್ಭದಲ್ಲಿ ಕಾಂಗ್ರೆಸ್ಗೆ ಕೈಕೊಟ್ಟರು. ಅಪ್ಪ ಮಕ್ಕಳ ರಾಜಕೀಯ ರಾಜ್ಯದ ಜನರಿಗೆ ಅರ್ಥವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಪರಭವಗೊಳ್ಳಲಿದ್ದಾರೆಂದು ಭವಿಷ್ಯ ನುಡಿದರು. ರಾಜಕೀಯ ಇತಿಹಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 4ಕ್ಕಿಂತ ಹಚ್ಚಿನ ಸ್ಥಾನಗಳನ್ನು ಪಡೆದಿಲ್ಲವೆಂದ ಅವರು ಕಳೆದ 10ವರ್ಷಗಳಿಂದ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದರು. ಸಮಾಜ ಕಲ್ಯಾಣ ಸಚಿವ ಎಚ್. ಅಂಜನೇಯ ಮಾತನಾಡಿ ಈ ಭಾಗದ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಅವರನ್ನು ಬೆಂಬಲಿಸಿ ಕಾಂಗ್ರೆಸ್ಗೆ ಮತ ನೀಡಲು ಮನವಿ ಮಾಡಿದರು.
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ನರೇಂದ್ರಮೋದಿ ಅವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದರು.
ವೆಂಕಟರಮಣಪ್ಪ, ತಾ,ಕಾಂಗ್ರೆಸ್ ಅಧ್ಯಕ್ಷ ಸುದೇಶ್ಬಾಬು ಎಚ್.ವಿ.ವೆಂಕಟೇಶ್, ಮಾನಂ ವೆಂಕಟಸ್ವಾಮಿ ಲಿಂಗಾರೆಡ್ಡಿ, ಜಯಣ್ಣ, ಮೈಲಾರರೆಡ್ಡಿ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.