ರೈತರ ಬೆಲೆ ಸಿಎಂಗೆ ತಿಳಿದಿಲ್ಲ'
ತಿಪಟೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳೆಗಾವಿ ರೈತ ವಿಠಲ ಅರಬಾವಿ ಆತ್ಮಹತ್ಯೆಗೆ ಸರ್ಕಾರ ಕಾರಣವಲ್ಲ. ಬದಲಾಗಿ ಆತ ಅತಿಯಾಗಿ ಕುಡಿದಿದ್ದರಿಂದ ಸತ್ತಿದ್ದಾನೆ ಎಂದು ತೀರಾ ಅವಹೇಳನಕಾರಿ ಹೇಳಿಕೆ ನೀಡಿರುವುದು ನಿಜಕ್ಕೂ ರೈತ ವರ್ಗಕ್ಕೆ ಮಾಡಿರುವ ಅಪಮಾನವಲ್ಲದೆ ಬೇರೇನೂ ಅಲ್ಲ ಎಂದು ತಾಲೂಕು ಬಿಜೆಪಿ ಮುಖಂಡ ಲೋಕೇಶ್ವರ ಖಂಡಿಸಿದ್ದಾರೆ.
ಪಟ್ಟಣದ ಗೃಹ ಕಚೇರಿಯಲ್ಲಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರ ಯಾವುತ್ತೂ ರೈತ ವಿರೋಧಿಯೇ ಎಂಬುದಕ್ಕೆ ಸಿದ್ದರಾಮಯ್ಯ ಅವರ ಮಾತೇ ಸಾಕ್ಷಿ. ದೇಶಕ್ಕೆ ಅನ್ನ ನೀಡುವ ರೈತನ ಜೀವದ ಬೆಲೆ ಕಾಂಗ್ರೆಸ್ ಆಡಳಿತದ ಮುಖ್ಯಮಂತ್ರಿಯಂತವರಿಗೇ ಲೆಕ್ಕಕ್ಕಿಲ್ಲ ಅಂದರೆ ಸಂಕಷ್ಟದಲ್ಲಿರುವ ರೈತನ ಗತಿ ಏನು ಎಂದು ಪ್ರಶ್ನಿಸಿದ ಅವರು ಬಿಜೆಪಿಯಿಂದ ಮಾತ್ರ ರೈತನ ಏಳಿಗೆಗೆ ಶ್ರಮಿಸಲು ಸಾಧ್ಯ. ನೀಡಿರುವ ಈ ಹೇಳಿಕೆಯನ್ನು ಹಿಂತೆಗೆದುಕೊಂಡು ರೈತರ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಲೋಕೇಶ್ವರ ಹೇಳಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಪರಮೇಶ್ವರರು ಸಹ ದೇಶದ ಮಾಜಿ ಪ್ರಧಾನಿ ಹಿರಿಯ ಮುತ್ಸದ್ದಿ ರಾಜಕಾರಣಿ ದೇವೇಗೌಡರ ವಿರುದ್ಧವೂ ಅಮಾನವೀಯವಾಗಿ ಮಾತನಾಡಿ ಕ್ಷಮೆಯಾಚಿಸಿರುವುದುವು ಅವರ ವ್ಯಕ್ತಿತ್ತವ ತೋರುತ್ತದೆ ಎಂದರು.
ತಾಲೂಕಿನ ಬೇಲೂರನಹಳ್ಳಿ,ಶಿವರ, ನಾಗತೀಹಳ್ಳಿ, ಲಕ್ಕೀಹಳ್ಳಿ ಮತ್ತಿತರೆ ಕೆರೆಗಳಿಗೆ ಹೇಮಾವತಿ ನೀರು ಹರಿಸಿಲ್ಲವಾದ್ದರಿಂದ ನಾವು ಮತದಾನ ಮಾಡುವುದಿಲ್ಲ ಎಂದು ತೆಗೆದುಕೊಂಡಿದ್ದ ನಿಲವಿನ ಬಗ್ಗೆ ನಾನು ಅವರ ಜೊತೆ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಮನದಟ್ಟು ಮಾಡಿ ಮತದಾನಕ್ಕೆ ಒಪ್ಪಿಸಿದ್ದೇನೆ ಎಂದರು. ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಲೆ ಜೋರಾಗಿರುವುದನ್ನು ಗಮನಿಸಿರುವ ಜಿಲ್ಲಾ ಮಂತ್ರಿ ಜಯಚಂದ್ರ ಅವರು ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದೇ ಜಿ.ಎಸ್.ಬಿ ಅವರ ಗೆಲವು ನಿಶ್ಚಿತ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದರು.