ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

8ಕ್ಕೆ ಗಾಂಧಿ ಅಧ್ಯಯನ ಕೇಂದ್ರ ಲೋಕಾರ್ಪಣೆ

Rashmi Kasaragodu
Updated On : 6 Apr 2014, 1:20 am

ತಿಪಟೂರು:  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೌಟಿಲ್ಯ ರಾಜ್ಯಶಾಸ್ತ್ರ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ ಮತ್ತು ಗಾಂಧಿ ವಿಚಾರಗಳ ಪ್ರಚಾರಾಂದೋಲನವನ್ನು ಕಾಲೇಜಿನ ಡಾ.ಅಬ್ದುಲ್ಕಲಾಂ ಸೆಮಿನಾರ್ ಬಹಾಲ್ನಲ್ಲಿ ಏ.8ರ ಮಂಗಳವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಡಾ.ಜಯದೇವಪ್ಪ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ.ಶ್ರೀನಿವಾಸಯ್ಯ ಉದ್ಘಾಟನೆ ಮಾಡಲಿದ್ದಾರೆ. ಡಾ. ವೂಡೇ. ಪಿ. ಕೃಷ್ಣ ಉಪನ್ಯಾಸ ನೀಡಲಿದ್ದು, ಎಚ್.ಬಿ. ದಿನೇಶ್ ಪ್ರಾಸ್ತಾವಿರ ನುಡಿಗಳನ್ನಾಡಲಿದ್ದಾರೆ. ಜಂಟಿ ನಿರ್ದೇಶಕಿ ಡಾ.ಬಿ.ಆರ್.ಮಮತಾ ಗಾಂಧಿ ಭಾವಚಿತ್ರ ಅನಾವರಣ ಮಾಡಲಿದ್ದು, ಚಂದ್ರಮೌಳೇಶ್ವರಸ್ವಾಮಿ ಉಚಿತ ಪುಸ್ತಕ ವಿತರಣೆ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement