ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕಸ್ಮಿಕ ಬೆಂಕಿ: ಅಪಾರಮರಗಳ ನಾಶ

Rashmi Kasaragodu
Updated On : 6 Apr 2014, 1:24 am

ಮಳವಳ್ಳಿ: ಅಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು, ನೀಲಗಿರಿ ಹಾಗೂ ಸರ್ವೇ ಬೆಳೆಗಳು ನಾಶವಾಗಿರುವ ಘಟನೆ ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಶಿವಸ್ವಾಮಿ, ಅಪ್ಪಣ್ಣ, ಮಹದೇವಪ್ಪ, ಸರ್ವಮಂಗಳಮ್ಮರಿಗೆ ಸೇರಿದ ಜಮೀನಿಗೆ ಬೆಂಕಿ ತಗುಲಿ ಕಬ್ಬು,ನೀಲಗಿರಿ ಸೇರಿದಂತೆ ಸರ್ವೇ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ಕಿರುಗಾವಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ಎಕರೆ ಕಬ್ಬು, ಒಂದು ಎಕರೆ ಸರ್ವೆ ಸೇರಿದಂತೆ ಒಂದು ಎಕರೆ ನೀಲಗಿರಿ ಬೆಳೆಗಳು ನಾಶವಾಗಿದ್ದು, ಆಗ್ನಿ ಶಾಮಕದಳ ಆಗಮಿಸುವಷ್ಟರಲ್ಲಿಯೆ ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದರೆನ್ನಲಾಗಿದೆ. ಈ ಕುರಿತು ದೂರನ್ನು ಸ್ವೀಕರಿಸಿರುವ ಕಿರುಗಾವಲು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್ಗೆ ಲಾರಿ ಡಿಕ್ಕಿ; ವ್ಯಕ್ತಿ ಸಾವು
ಹಲಗೂರು: ಸಮೀಪದ ರೈಸ್ ಮಿಲ್ ಸಮೀಪ ಬೈಕ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಿಂಗರಾಜಅರಸು (40) ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.  ಲಿಂಗಪಟ್ಟಣ ವಾಸಿ ಯಡಿಯೂರು ರಾಜ ಅರಸು ಅವರ ಮಗ ಲಿಂಗರಾಜಅರಸು ಮಳವಳ್ಳಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತ ನಡೆಸಿದ ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಲಾರಿಯನ್ನು ಬೆಳಕವಾಡಿ ಪೊಲೀಸರು ಹಿಡಿದು ಹಲಗೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮಲ್ಲರಾಜಅರಸು ದೂರು ನೀಡಿದ್ದು, ಎಸ್ಐ ವೈ.ಎಸ್ ಚಂದ್ರಶೇಖರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಲ್ಸಿಡಿ ಟಿವಿ ಕಳವು
ಪಾಂಡವಪುರ: ಹಾರೋಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ವಿವಾಹಕ್ಕೆಂದು ಹಾಕಲಾಗಿದ್ದ ಎಲ್ಸಿಡಿ ಟಿವಿಯನ್ನು ಕಳವು ಮಾಡಿದ ಘಟನೆ ನಡೆದಿದೆ. ಪಟ್ಟಣದ ಗಾಣಿಗರ ಬೀದಿ ನಿವಾಸಿ, ಛಾಯಾಗ್ರಾಹಕ ಪಿ.ಆನಂದ್ ಎಂಬುವರು 40 ಸಾವಿರ ಬೆಲೆ ಬಾಳುವ ಎಲ್ಸಿಡಿ ಟಿವಿಯನ್ನು ಹಾರೋಹಳ್ಳಿ ಗ್ರಾಮದ ವಿವಾಹ ಛತ್ರದಲ್ಲಿ ಹಾಗಿದ್ದ ವೇಳೆ ಕದಿಯಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪರಿಚಿತ ವ್ಯಕ್ತಿ
ನೇಣಿಗೆ ಶರಣು
ಪಾಂಡವಪುರ: ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣಿಗೆ ಶರಣಾಗಿರುವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿಗೆ ಸುಮಾರು 35 ವರ್ಷ ವಯಸ್ಸಿರಬಹುದು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement