ಅಭಿವೃದ್ಧಿಗಾಗಿ ಕಮಲ ಗೆಲ್ಲಿಸಿ: ಮಾಜಿ ಸಿಎಂ ಬಿಎಸ್ವೈ
ಗುಬ್ಬಿ: ದೇಶದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಕಮಲವನ್ನು ದೇಶದಲ್ಲೆಡೆ ಅರಳಿಸಬೇಕಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಹೊಸಕೆರೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೂ, ಅವೆಲ್ಲವನ್ನು ದೂರ ಮಾಡಿ ನರೆಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹತ್ತು ವರ್ಷಗಳಿಂದ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಯಾವುದೇ ಪ್ರಯೋಜನಕಾರಿ ಕೆಲಸ ಮಾಡಿಲ್ಲ ಎಂದು ದೂರಿದರು.ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದಿಶ್, ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ಗೌಡ, ತಾಲೂಕು ಅಧ್ಯಕ್ಷ ಟಿ.ಬೈರಪ್ಪ ವಿಜಯಕುಮಾರ್, ಸಾಗರನಹಳ್ಳಿ ನಟರಾಜು, ಬೈರಪ್ಪ, ಜಿಪಂ ಸದಸ್ಯ ಚಂದ್ರಶೇಖರಬಾಬು, ತಾಪಂ ಸದಸ್ಯ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.