ಕೊರಟಗೆರೆಯಲ್ಲಿ ಮತಜಾಗೃತಿ
ಕೊರಟಗೆರೆ: ಮತದಾನ ಮಾಡುವ ಮೂಲಕ ಲೋಕಸಭೆಗೆ ಪ್ರತಿನಿಧಿ ಆಯ್ಕೆ ಮಾಡಿ ಕಳುಹಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಎಂದು ತಹಸೀಲ್ದಾರ್ ಡಿ.ಕೆ.ರಾಮಚಂದ್ರಪ್ಪ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ತುಮಕೂರು ಸ್ವೀಪ್ ಸಮಿತಿ, ತಾಲೂಕು ಲೋಕ ಶಿಕ್ಷಣ ಸಮಿತಿ, ತಾಲೂಕು ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮತದಾನ ಹೆಚ್ಚಿಸಲು ಜನತೆಯಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಅರೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು ವೀರಗಾಸೆ ಪ್ರದರ್ಶನ ಮಾಡಿದರೆ, ಲೋಕ ಶಿಕ್ಷಣ ಸಮಿತಿ ಪ್ರೇರಣಾ ಕಾರ್ಯಕರ್ತರು ಘೋಷಣೆಯ ಮೂಲಕ ಮತ ನೀಡುವುದು ನಮ್ಮ ಅಧಿಕಾರ, ಧಿಕ್ಕರಿಸುವೆವು ಭ್ರಷ್ಟಾಚಾರ, ಯಾರು ಮಾಡುವರೂ ಅಭಿವೃದ್ಧಿಗಾಗಿ ಕೆಲಸ ಅವರಿಗೆ ಹಾಕುವೆವು ಮತ ನಾವು ಎಂಬ ಘೋಷ ವಾಕ್ಯಗಳೊಂದಿಗೆ ಕೊರಟಗೆರೆ ಪಟ್ಟಣದ ಪ್ರಧಾನ ರಸ್ತೆಯಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.