ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಗಜೀವನರಾಂ ಜಯಂತಿ ಆಚರಣೆ

Rashmi Kasaragodu
Updated On : 6 Apr 2014, 1:21 am

ಕುಣಿಗಲ್: ಡಾ.ಬಾಬುಜಗಜೀವನರಾಂ 107ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಶನಿವಾರ ಪಟ್ಟಣದ ಕಂದಾಯ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.ಚುನಾವಣೆ ನೀತಿ ಸಂಹಿತೆ ಕಾರಣ, ಜನಪ್ರತಿನಿಧಿಗಳು ಗೈರಾಗಿದ್ದು,  ತಹಸೀಲ್ದಾರ್ ಶಂಭುಲಿಂಗಯ್ಯ ದೀಪ ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೇಶವು ಬರಗಾಲ ಸ್ಥಿತಿಯಲ್ಲಿದ್ದಾಗ ಹಸಿರು ಕ್ರಾಂತಿಯ ಹಲವು ಯೋಜನೆಗಳನ್ನು ರೂಪಿಸಿ, ಕಷ್ಟಕಾಲದಲ್ಲೂ ಸತತ ಸಾಧನೆ ಮೂಲಕ ಉತ್ತಮ ಕೆಲಸ ಮಾಡಿತೋರಿಸಬಹುದೆಂದು ಸಾಬೀತುಪಡಿಸಿದ ಉತ್ತಮ ಮಾರ್ಗದರ್ಶಿ ಎಂದು ಇದೇ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು. ಉಪನ್ಯಾಸಕ ಸಿದ್ದಲಿಂಗಸ್ವಾಮಿ ಉಪನ್ಯಾಸ ನೀಡಿದರು. ತಾಪಂ ಇಒ ಶಂಕರಪ್ಪ, ಶಿರಸ್ತೇದಾರ್ ತಿಮ್ಮಯ್ಯ, ಸಮಾಜ ಕಲ್ಯಾಣಾಧಿಕಾರಿ ಜಯಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement