ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ದಲಿತರಿಗೆ ವಂಚನೆ'

Rashmi Kasaragodu
Updated On : 6 Apr 2014, 1:23 am

ಶಿರಾ: 6 ಲಕ್ಷ ಕ್ಕೂ ಹೆಚ್ಚು ದಲಿತ ಸಮುದಾಯವನ್ನು ಹೊಂದಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು,
ಸ್ಥಳೀಯ ದಲಿತ ಮುಖಂಡರನ್ನು ಗುರುತಿಸುವಲ್ಲಿ ಆ ಪಕ್ಷ ವಿಫಲವಾಗಿದೆ ಎಂದು ಚಿತ್ರದುರ್ಗ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ರಾಜಗಿರಿ ಆಕ್ರೋಶ ವ್ಯಕ್ತಪಡಿಸಿದರು.
ಶಿರಾದಲ್ಲಿ ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದೆಯೇ ಹೊರತು, ಅವರ ಅಭಿವೃದ್ಧಿಗೆ  ಕಿಂಚಿತ್ತು ಪ್ರಯತ್ನ ಮಾಡಿಲ್ಲ ಎಂದರು.
ದೇಶದಲ್ಲಿ ಅಂಬೇಡ್ಕರ್ ಹೆಸರನ್ನು ಹೇಳಿಕೊಂಡು ಅವರು ಬರೆದಿರುವ ಸಂವಿಧಾನ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲರಾಗಿವೆ ಎಂದು ದೂರಿದರು. ಬಿಎಸ್ಪಿ ಮುಖಂಡರಾದ ಜಿ.ಎನ್. ರಾಜಸಿಂಹ, ಚಿತ್ರದುರ್ಗ ಬಿಎಸ್ಪಿ ಅಧ್ಯಕ್ಷ ತಿಮ್ಮಯ್ಯ, ತಾಲೂಕು ದಸಂಸ ಅಧ್ಯಕ್ಷ ಟೈರ್ ರಂಗನಾಥ, ಖಜಾಂಚಿ ರಾಜಣ್ಣ, ಕಾರ್ಯದರ್ಶಿ ಗುಮ್ಮನಹಳ್ಳಿ ಮಂಜುನಾಥ, ರಾಮಕೃಷ್ಣೇಗೌಡ, ಫಾಜಿಲ್, ಆಪ್ರೋಜ್ ಮತ್ತಿತರರು ಹಾಜರಿದ್ದರು.
'ಮತ ಚಲಾಯಿಸಿ'
ಕುಣಿಗಲ್: ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ಮತದಾನ ಹಕ್ಕನ್ನು ಹೊಂದಿರುವ ಈ ನಾಡಿನ ಪ್ರಜೆಗಳು ಮತದಾನದವು ತಮ್ಮ ಹಕ್ಕು ಹಾಗೂ ಕರ್ತವ್ಯ ಎಂದು ಭಾವಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮಿಜಿ ತಿಳಿಸಿದರು.
ಶನಿವಾರ ಕಲ್ಲುಪಾಳ್ಯ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮತದಾರರ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು. ಮತದಾನದ ಮಹತ್ವ ಅರಿತು, ಚುನಾವಣೆಯಲ್ಲಿ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಅರ್ಹ ಅಭ್ಯರ್ಥಿಗೆ ಯಾವುದೇ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸುವ ಮೂಲಕ ಈ ನಾಡಿನ ಜವಾಬ್ದಾರಿಯುತ ಪ್ರಜೆಯ ಹಕ್ಕನ್ನು ಚಲಾಯಿಸುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದರು.
ರಾಮೋತ್ಸವ
ತುಮಕೂರು: 47ನೇ ರಾಮೋತ್ಸವವನ್ನು ಏ. 8 ರಿಂದ 20 ರವರೆಗೆ ಆಚರಿಸಲಾಗುವುದು ಎಂದು ಶ್ರೀರಾಮ ಸೇವಾ ಸಮಿತಿ ಗೌರವಾಧ್ಯಕ್ಷ ಡಾ. ಸಿ. ಜಯರಾಮರಾವ್ ತಿಳಿಸಿದರು.
ಇಲ್ಲಿನ ಕೆ.ಆರ್. ಬಡಾವಣೆಯ ಶ್ರೀರಾಮರ ದೇವಾಲಯದಲ್ಲಿ ಕರೆಯಲಾಗಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಮೋತ್ಸವ ಆಚರಿಸಲು ಸಕಲ ಸಿದ್ದತೆಗಳು ನಡೆದಿದ್ದು, ಈ ವೇಳೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ತುಮಕೂರಿನ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿದ್ದ ಸಮಾನ ಮನಸ್ಸುಳ್ಳ ಸಮಾನ ವಯೋವಾನದ 20 ಸ್ಥಾಪಕ ಸದಸ್ಯರಾದ ಡಾ.ಕೆ.ಎಸ್. ಸುಧೀಂದ್ರಪ್ರಸಾದ್, ಕೆ. ಗರುಡಾಚಾರ್, ಡಾ. ಸಿ. ಜಯರಾಮರಾವ್, ಕೆ.ಆರ್. ನಂಜುಂಡಯ್ಯ, ಜಿ.ಎನ್. ಭೀಮಸೇನರಾವ್, ಎ.ಎಸ್. ಕೃಷ್ಣ ಮೂರ್ತಿ, ಬಿ.ಪಿ. ಗೋಪಾಲಕೃಷ್ಣರಾವ್, ಟಿ.ವಿ. ರಾಮಕೃಷ್ಣರಾವ್, ಬಿ. ರಂಗಣ್ಣ, ಟಿ.ಎನ್. ಸತ್ಯನಾರಾಯಣ ಶೆಟ್ಟಿ, ಟಿ. ಅನಂತರಾಮಶೆಟ್ಟಿ ಮತ್ತಿತರರ ನೇತೃತ್ವದಲ್ಲಿ 1967ರಲ್ಲಿ ರಾಮಸೇವಾ ಸಮಿತಿ ಹೆಸರಲ್ಲಿ ರಾಮೋತ್ಸವ ಆಚರಣೆಗೆ ಚಾಲನೆ ನೀಡಲಾಗಿತ್ತು ಎಂದರು.
ನಾಳೆ ಸಂವಾದ
ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.7 ರಂದು ಸಮಗ್ರ ಭಾರತ ವಿಕಾಸಕ್ಕಾಗಿ ಮೋದಿ ವಿಷಯವಾಗಿ ನಡೆಯುವ ಈ ಸಂವಾದ ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವ,  ಬಿಜೆಪಿಯ ರಾಷ್ಟ್ರೀಯ ಮುಖಂಡ ಡಾ.ಸುಬ್ರಮಣ್ಯ ಸ್ವಾಮಿ ನಡೆಸಿಕೊಡಲಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ತುಮಕೂರಿನ ಕೈಗಾರಿಕೋದ್ಯಮಿಗಳು, ವಕೀಲರು, ವೈದ್ಯರು, ಲೆಕ್ಕ ಪರಿಶೋಧಕರು, ಮತ್ತು ವಿದ್ಯಾಥಿಯಂಗಳು, ರಾಜಕೀಯ ಮುಖಂಡರು ಹಾಗೂ ನಗರದ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. 7 ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಹೊಟೇಲ್ ನವೀನ್ ರಿಜೆನ್ಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಮಾಧ್ಯಮ ಪ್ರಮುಖ್ ಎಚ್.ಎನ್. ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement