ಬಿಎಸ್ಪಿ ಅಭ್ಯರ್ಥಿ ಗೆಲ್ಲಿಸಲು ರಾಮಸುಬ್ಬಯ್ಯ ಮನವಿ
ಪಾವಗಡ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ಪಿ ವತಿಯಿಂದ ಟಿ.ಡಿ.ರಾಜಗಿರಿ ಸ್ಪರ್ಧಿಸಿದ್ದು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವಂತೆ ಪಾವಗಡ ತಾಲೂಕು ಬಿಎಸ್ಪಿ ಅಧ್ಯಕ್ಷ ಬಿ.ಟಿ.ರಾಮಸುಬ್ಬಯ್ಯ ಮನವಿ ಮಾಡಿದ್ದಾರೆ.
17ರಂದು ನಡೆಯುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬಹುಜನ ಸಮಾಜ ಪಾರ್ಟಿಯಿಂದ ಸ್ಥಳೀಯರಾದ ಟಿ.ಡಿ ರಾಜಗಿರಿ ಸ್ವರ್ಧಿಸಿದ್ದಾರೆ. ದಲಿತರು ಮತ್ತು ತಾಲೂಕಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಉತ್ತರ ಪ್ರದೇಶದ ಸಿಎಂ ಮಾಯವತಿ ನೇತ್ರತ್ವದ ಬಿಎಸ್ಪಿ ದಲಿತರು ಮತ್ತು ಶೋಷಿತರ ಪರ ಕೆಲಸ ಮಾಡುತ್ತಿದ್ದು ಉತ್ತರ ಪ್ರದೇಶದಲ್ಲಿ ಮಾದರಿಯಾಗಿದೆ ಎಂದರು.