ಮಹಿಳೆಯರಿಗೆ ಆದ್ಯತೆ ನೀಡಿಲ್ಲ ನಮ್ಮಿಂದ ತಪ್ಪಾಗಿದೆ: ವಿಷಾದ
ತುಮಕೂರು: ಶ್ರೀರಾಮ ಸೇವಾ ಸಮಿತಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ. ಗುರುತರವಾದ ತಪ್ಪಾಗಿದೆ. ಮುಂದೆ ತಿದ್ದಿಕೊಳ್ಳುತ್ತೇವೆ ಎಂದು ಶ್ರೀಕೃಷ್ಣ ರಾಜೇಂದ್ರ ಬಡಾವಣೆಯಲ್ಲಿರುವ ಶ್ರೀರಾಮ ದೇವಾಲಯ ಗೌರವಾಧ್ಯಕ್ಷ ಡಾ.ಸಿ. ಜಯರಾಮರಾವ್ ಭರವಸೆ ನೀಡಿದರು.
ಅವರು ತುಮಕೂರಿನ ಶ್ರೀರಾಮ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಶ್ರೀರಾಮಸೇವಾ ಸಮಿತಿಯಲ್ಲಿ ಒಬ್ಬ ಮಹಿಳೆಯೂ ಇಲ್ಲವಲ್ಲ. ಇದು ಸೀತಾಮಾತೆಯನ್ನು ಕಡೆಗಣಿಸಿದಂತಲ್ಲವೇ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಮಹಿಳೆಯರು ಸಮಿತಿಯಲ್ಲಿರದ ಬಗ್ಗೆ ತಾವು ಗಮನಿಸಿರಲಿಲ್ಲ. ನೀವು ಹೇಳಿದ್ದು ಸತ್ಯ. ಮುಂದೆ ಮಹಿಳೆಯರಿಗೆ ಸಮಿತಿಯಲ್ಲಿ ಆದ್ಯತೆ ನೀಡಲಾಗುವುದು. ಸಮಾನತೆ ಕಾಯ್ದುಕೊಳ್ಳಲಾಗುವುದು ಎಂದು ಜಯರಾಮ್ರಾವ್ ಸ್ಪಷ್ಟಪಡಿಸಿದರು.